ಶಿವಮೊಗ್ಗ ಲೈವ್.ಕಾಂ |SHIMOGA NEWS | 9 DECEMBER 2020
ಪೊಲೀಸ್ ಇಲಾಖೆ ವೈಫಲ್ಯಕ್ಕೆ ವರ್ತಕರನ್ನು ಬಲಿಪಶು ಮಾಡಲಾಗುತ್ತಿದೆ. ಕರ್ಫ್ಯೂ, ನಿಷೇಧಾಜ್ಞೆಯಿಂದ ಶಿವಮೊಗ್ಗದಲ್ಲಿ ವ್ಯಾಪಾರ, ವಹಿವಾಟಿಗೆ ತೀವ್ರ ತೊಂದರೆ ಆಗುತ್ತಿದೆ ಎಂದು ಆರೋಪಿಸಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವಮೊಗ್ಗದ ವರ್ತಕರ ಜೊತೆಗೆ ಡಿಸಿ ಕೆ.ಬಿ.ಶಿವಕುಮಾರ್ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಸಭೆ ನಡೆಸಿದರು. ಈ ವೇಳೆ ನಿಷೇಧಾಜ್ಞೆ, ಕರ್ಫ್ಯೂನಿಂದಾಗಿ ವರ್ತಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.
ಯಾರಿಗೂ ತೊಂದರೆ ಆಗುವುದಿಲ್ಲ
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಯಾರಿಗೂ ತೊಂದರೆ ಆಗದಂತೆ ನೋಡಕೊಳ್ಳುವುದು ನಮ್ಮ ಉದ್ದೇಶ. ಅನಿವಾರ್ಯ ಕಾರಣಗಳಿಂದ ನಿಷೇಧಾಜ್ಞೆ, ಕರ್ಫ್ಯೂ ವಿಧಿಸಲಾಗಿದೆ. ಶಾಂತಿ ಕಾಪಾಡಲು ಎಲ್ಲರ ನೆರವು ಅಗತ್ಯ ಎಂದರು.
RELATED NEWS | ಹನ್ನೊಂದು ಗಂಟೆಗೆ ಸೈರನ್ ಶಬ್ದ, ಗಾಂಧಿ ಬಜಾರ್ ಸ್ಥಬ್ಧ, ಕರ್ಫ್ಯೂ ಸಡಿಲದ ಅವಧಿ ಹೇಗಿತ್ತು ಬಜಾರ್ ವಾತಾವರಣ?
ಮೂರು ಠಾಣೆ ವ್ಯಾಪ್ತಿಯಲ್ಲಷ್ಟೆ ಕರ್ಫ್ಯೂ
ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಕೋಟೆ, ದೊಡ್ಡಪೇಟೆ, ತುಂಗಾ ನಗರ ಠಾಣೆಗಳ ವ್ಯಾಪ್ತಿಯಲ್ಲಿ ಮಾತ್ರ ಕರ್ಫ್ಯೂ ವಿಧಿಸಲಾಗಿದೆ. ಉಳಿದ ಭಾಗದಲ್ಲಿ ವ್ಯಾಪಾರ, ವಹಿವಾಟಿಗೆ ಯಾವುದೆ ತೊಂದರೆ ಇಲ್ಲ. ವರ್ತಕರು ಸಿಸಿಟಿವಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಎಲ್ಲರಿಗೂ ಅನುಕೂಲ ಎಂದು ಮನವಿ ಮಾಡಿದರು.
ವರ್ತಕರ ಆಗ್ರಹಗಳೇನು?
- ಕೋವಿಡ್ ಲಾಕ್ಡೌನ್ನಿಂದಾಗಿ ಈಗಾಗಲೇ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ನಷ್ಟವನ್ನು ಅನುಭವಿಸಿದ್ದಾರೆ.
- ಪೊಲೀಸ್ ಇಲಾಖೆ ವೈಫಲ್ಯದಿಂದಾಗಿ ಶಿವಮೊಗ್ಗದಲ್ಲಿ ಗಲಭೆ ಸಂಭವಿಸಿದ್ದು, ವರ್ತಕರನ್ನು ಬಲಿಪಶು ಮಾಡಲಾಗುತ್ತಿದೆ.
- ವ್ಯಾಪಾರ, ವಹಿವಾಟಿಗೆ ಯಾವುದೆ ತೊಂದರೆ ಆಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳಬೇಕು.
- ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕು.
VIDEO REPORT
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಉಪಾಧ್ಯಕ್ಷ ರುದ್ರೇಶ್, ಉದಯ್ ಕುಮಾರ್, ಗೋಪಿನಾಥ್, ಅಶ್ವಥನಾರಾಯಣ ಶೆಟ್ಟಿ ಸೇರಿದಂತೆ ಹಲವರು ಸಭೆಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]