SHIVAMOGGA LIVE NEWS
SHIMOGA | ದೀಪಾವಳಿ ಹಬ್ಬದ ಅಂಗವಾಗಿ ಶಿವಮೊಗ್ಗದಲ್ಲಿ ಹಬ್ಬದ ಖರೀದಿ ಬಿರುಸಾಗಿದೆ. ಹೂವು, ಹಣ್ಣು, ತರಕಾರಿ, ಪೂಜಾ ಸಾಮಗ್ರಿಗಳ ಖರೀದಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸಿದ್ದಾರೆ. (DEEPAVALI PURCHASE)
ಗಾಂಧಿ ಬಜಾರ್, ಶಿವಪ್ಪನಾಯಕ ಹೂವಿನ ಮಾರುಕಟ್ಟೆ, ವಿನೋಬನಗರ ಎಪಿಎಂಸಿ ಮತ್ತು ನಗರದ ವಿವಿಧೆಡೆ ಹೂವು, ಹಣ್ಣು ಮಾರಾಟ ಮಾಡಲಾಗುತ್ತಿದೆ.
(DEEPAVALI PURCHASE)
ಬೆಳಗ್ಗೆಯಿಂದಲೆ ಖರೀದಿಗೆ ಜನ
ಮಂಗಳವಾರ ಗ್ರಹಣ ಇದೆ. ಹಾಗಾಗಿ ಸೋಮವಾರವೆ ಲಕ್ಷ್ಮಿ ಪೂಜೆಗೆ ಶ್ರೇಷ್ಠ ಸಮಯ ಎಂದು ಇವತ್ತೆ ಪೂಜಾ ಸಾಮಗ್ರಿ ಖರೀದಿ ಮಾಡಲಾಗುತ್ತಿದೆ. ಹೂವು, ಹಣ್ಣು, ಬಾಳೆ ಕಂದು, ಕುಂಬಳಕಾಯಿ ಮಾರಾಟ ಜೋರಾಗಿದೆ. ಇನ್ನು, ದೀಪಾವಳಿ ಅಂಗವಾಗಿ ಹಣತೆ, ವಿಭಿನ್ನ ಬಗೆಯ ಲೈಟಿಂಗ್ ಸೇರಿದಂತೆ ಹಲವು ಅಲಂಕಾರಿಕ ವಸ್ತುಗಳ ಖರೀದಿಯು ಬಿರುಸಾಗಿದೆ. (DEEPAVALI PURCHASE)
(DEEPAVALI PURCHASE)
ಎಲ್ಲದರು ಬೆಲೆ ಗಗನಮುಖಿ
ಹಬ್ಬದ ಖರೀದಿಗೆ ಬಂದ ಗ್ರಾಹಕರ ಜೇಬಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಚಂಡು ಹೂವು ಪ್ರತಿ ಕೆ.ಜಿಗೆ 100 ರೂ., ಒಂದು ಮಾರು ಖರೀದಿಸಿದರೆ 80 ರೂ. ಗಿಂತಲು ಹೆಚ್ಚು, ಸೇವಂತಿಗೆ ಕೆ.ಜಿ 200 ರೂ., ಮಾರು 50 ರಿಂದ 100 ರೂ. ಗುಲಾಬಿ ಕೆ.ಜಿ 400 ರೂ. ಇದೆ. ಸೇಬು, ಕಿತ್ತಳೆ, ಸಪೋಟ ಕೆ.ಜಿ 100 ರೂ. ನಿಂದ ಆರಂಭವಾಗಲಿದೆ. ದಾಳಿಂಬೆ ಕೆ.ಜಿಗೆ 150 ರೂ., ದ್ರಾಕ್ಷಿ ಮತ್ತು ಪೇರಲೆ ಕೆ.ಜಿ. 120 ರೂ. ನಿಂದ ಆರಂಭವಾಗಲಿದೆ.
ತಲೆ ಮೇಲೆ ಕೈ ಹೊತ್ತ ವ್ಯಾಪಾರಿಗಳು
ಹೂವಿನ ಬೆಲೆ ದುಬಾರಿಯಾಗಿದ್ದು ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ‘ದೀಪಾವಳಿ ನಮ್ಮನ್ನ ದಿವಾಳಿ ಮಾಡುತ್ತಿದೆ. ಹೂವುಗಳ ಬೆಲೆ ಏರಿಕೆಯಾಗಿದೆ. ಇದೆ ಕಾರಣಕ್ಕೆ ಗ್ರಾಹಕರು ಬರುತ್ತಿಲ್ಲ. ಸಂಜೆ ವೇಳೆಗೆ ವ್ಯಾಪಾರವಾದರೆ ನಾವು ನೆಮ್ಮದಿಯಿಂದ ಹೊರಡಬಹುದು’ ಅನ್ನುತ್ತಾರೆ ಹೂವು ಮಾರಾಟಗಾರರು. (DEEPAVALI PURCHASE)
ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗದಲ್ಲಿ ಪಟಾಕಿ ಖರೀದಿ ಜೋರು, ಈ ಸರ್ತಿ ಹೇಗಿದೆ ರೇಟು? ವ್ಯಾಪಾರಿಗಳು, ಗ್ರಾಹಕರು ಹೇಳೋದೇನು?
ಇತ್ತ ಗ್ರಾಹಕರು ಕೂಡ ಹೂವು, ಹಣ್ಣು ದುಬಾರಿಯಾಗಿದೆ ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ‘ಪೂಜೆ ಮಾಡಲು ಹೂವು ಬೇಕು, ಹಣ್ಣು ಬೇಕು. ಎಲ್ಲದರ ರೇಟು ಜಾಸ್ತಿಯಾಗಿದೆ. ದಸರಾದಲ್ಲಿದ್ದ ಹಾಗೆ ರೇಟ್ ಇದೆ. ಕೈಲಾದಷ್ಟು ಕೊಂಡು ಹೋಗಿ ಪೂಜೆ ಮಾಡುತ್ತಿದ್ದೇವೆ’ ಅನ್ನುತ್ತಾರೆ ಲಕ್ಷ್ಮಮ್ಮ.
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.