ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 27 NOVEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಧೀರ ದೀವರ ಬಳಗ, ಹಳೆಪೈಕ ದೀವರ (deevara) ಸಂಸ್ಕೃತಿ ಸಂವಾದ ಬಳಗದ ವತಿಯಿಂದ ಈಡಿಗ ಸಮುದಾಯ ಭವನದಲ್ಲಿ ದೀವರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾರಗನಜಡ್ಡು ಶ್ರೀಕ್ಷೇತ್ರ ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು.
ಯಾರೆಲ್ಲ ಏನೇನು ಹೇಳಿದರು?
ಮೂವರಿಗೆ ಧೀರ ದೀವರ ಪ್ರಶಸ್ತಿ
ಕಾರ್ಯಕ್ರಮದಲ್ಲಿ ದೀವರ ಸಾಂಸ್ಕತಿಕ ವೈಭವದಲ್ಲಿ ಬೂಮಣ್ಣಿ ಬುಟ್ಟಿ, ಹಸೆ ಚಿತ್ತಾರ ಸ್ಪರ್ಧೆಯಲ್ಲಿ 98 ಕಲಾವಿದರು ಭಾಗವಹಿಸಿದ್ದರು. ಬುಟ್ಟಿ ಚಿತ್ತಾರ ವಿಭಾಗದಲ್ಲಿ ಅಮೃತ ವರ್ಷಿಣಿ ಚಂದ್ರಗುತ್ತಿ ಪ್ರಥಮ, ನೀಲಾವತಿ ಕುಗ್ವೆ ದ್ವಿತೀಯ, ಕಾವ್ಯ ಆಲಹಳ್ಳಿ ತೃತೀಯ ಬಹುಮಾನ ಪಡೆದಿದ್ದಾರೆ. ಹಸೆ ಚಿತ್ತಾರ ವಿಭಾಗದಲ್ಲಿ ಸ್ವಾತಿ ಪುನೀತ್ ಹೆಬ್ಬೂರು ಪ್ರಥಮ, ರಚನಾ ಸಾಗರ್ ದ್ವಿತೀಯ, ರಂಜಿತಾ ಮರಸ ತೃತೀಯ ಬಹುಮಾನ ಪಡೆದರು.
ಇದನ್ನೂ ಓದಿ – ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಸರಣಿ ಅಪಘಾತ, ಡಿವೈಡರ್ ಹತ್ತಿದ ಓಮ್ನಿ ಕಾರು
ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಎಸ್. ರಾಮಪ್ಪ, ಹಿರಿಯ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮಮ್ಮ ಗಡೇಮನೆ, ಅಂತರಾಷ್ಟ್ರೀಯ ಡೊಳ್ಳುಕುಣಿತ ಕಲಾವಿದ ಬಿ.ಟಾಕಪ್ಪ ಕಣ್ಣೂರು ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಅವರು ‘ಧೀರ ದೀವರು’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ , ಸುರೇಶ್ ಕೆ. ಬಾಳೆಗುಂಡಿ, ಜಿ.ಡಿ. ನಾರಾಯಣಪ್ಪ, ಕೆಎಎಸ್ ಅಧಿಕಾರಿಗಳಾದ ಕೆ. ಚೆನ್ನಪ್ಪ, ಹೆಚ್.ಕೆ. ಕೃಷ್ಣಮೂರ್ತಿ, ಶ್ರೀಧರ್ ಆರ್. ಹುಲ್ತಿಕೊಪ್ಪ, ಮೋಹನ್ ಚಂದ್ರಗುತ್ತಿ, ರಾಜನಂದಿನಿ ಕಾಗೋಡು, ಗೀತಾಂಜಲಿ ದತ್ತಾತ್ರೇಯ, ಅಣ್ಣಪ್ಪ ಮಳಿಮಠ, ರವಿರಾಜ್ ಸಾಗರ್ ಇದ್ದರು.