ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 11 ಡಿಸೆಂಬರ್ 2019
ಕಳೆದ ಒಂದು ವರ್ಷ ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡಿದ ತೃಪ್ತಿ ಇದ್ದು 350ಕ್ಕೂ ಹೆಚ್ಚು ಕಾಮಗಾರಿ ಆರಂಭಿಸಿದ್ದು, ಅವು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ನಾವು ಐದು ವರ್ಷಗಳ ಅವಧಿಯಲ್ಲಿ ನಗರದ ಸರ್ವಾಂಗೀಣ ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ಕೆಲಸ ಮಾಡುತ್ತಿದ್ದವೆ ಎಂದು ಉಪಮೇಯರ್ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಕೆಲ ದಿನಗಳ ಹಿಂದಷ್ಟೇ ಪಾಲಿಕೆ ಆಡಳಿತ ವೈಖರಿ ಹಾಗೂ ವೈಫಲ್ಯಗಳ ಬಗ್ಗೆ ವಿಪಕ್ಷದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಆರೋಪದ ಸುರಿಮಳೆಗೈದಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸುದ್ದಿಗೋಷ್ಠಿ ನಡೆಸಿದ ಉಪಮೇಯರ್ ಒಂದು ವರ್ಷದಲ್ಲಿ ಬಿಜೆಪಿ ಆಡಳಿತದ ಸಾಧನೆಗಳ ಬಗ್ಗೆ ವಿವರಿಸಿದರು.
ಉದ್ಯಾನ ಅಭಿವೃದ್ಧಿ, ಬಡವರಿಗೆ ನಿವೇಶನ ಹಂಚಿಕೆ, ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳತ್ತ ಗಮನಹರಿಸುವುದು, ಕುಡಿಯುವ ನೀರಿನ ಯೋಜನೆ, ಪಾಲಿಕೆ ವ್ಯಾಪ್ತಿಗೆ ಸೇರಿದ ಸುಮಾರು 21 ಹಳ್ಳಿಗಳಲ್ಲಿ ಮೂಲ ಸೌಲಭ್ಯ, ಬೀದಿ ದೀಪ ನಿರ್ವಹಣೆ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹೀಗೆ ಎಲ್ಲ ರೀತಿಯ ಅಭಿವೃದ್ಧಿಗಾಗಿ ಪಾಲಿಕೆ ಗಮನಹರಿಸುತ್ತಲೇ ಇದೆ ಎಂದರು.
ಅಮೃತ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಆತಿವೃಷ್ಟಿ ಸಂದರ್ಭ ಪಕ್ಷಭೇದ ಮರೆತು ಸಂಘ ಸಂಸ್ಥೆಗಳ ನೆರವಿನೊಂದಿಗೆ, ಅಧಿಕಾರಿಗಳ ಸಹಾಯದಿಂದ ಅತ್ಯಂತ ಮಾನವೀಯತೆಯಿಂದ ಪರಿಸ್ಥಿತಿ ನಿಭಾಯಿಸಲಾಗಿದೆ. ಭಾಗಶಃ ಮನೆ ಬಿದ್ದವರಿಗೆ 10 ಸಾವಿರ, ಪೂರ್ತಿ ಮನೆ ಬಿದ್ದವರಿಗೆ 25 ಸಾವಿರ ರೂ. ಪಾಲಿಕೆಯಿಂದ ನೀಡಿದ್ದೇವೆ ಎಂದು ತಿಳಿಸಿದರು.
ಮೇಯರ್ ಲತಾ ಗಣೇಶ್, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ನಾಗರಾಜ್, ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ಸುನಿತಾ ಅಣ್ಣಪ್ಪ, ಆರತಿ, ವಿಶ್ವಾಸ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಳೆಕೆರೆ, ಮೋಹನ್ ರೆಡ್ಡಿ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga Mahanagara Palike Deputy Mayor SN Channabasappa said during his administration 350 projects has been launched.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422