ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಡಿಸೆಂಬರ್ 2021
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ತೀವ್ರ ಕುತೂಹಲ ಕೆರಳಿಸಿದ್ದ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ತೀರ್ಥಹಳ್ಳಿಯ ಧರ್ಮೇಶ್ ಸಿರಿಬೈಲು ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಭದ್ರಾವತಿಯ ಕುಮಾರ್ ಅವರಿಗಿಂತಲೂ ಎರಡು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಧರ್ಮೇಶ್ ಅವರು 5808 ಮತಗಳನ್ನು ಪಡೆದಿದ್ದಾರೆ. ಕುಮಾರ್ ಅವರು 3486 ಮತಗಳನ್ನು ಗಳಿಸಿದ್ದಾರೆ. ಬಹುಮತ ಪಡೆದ ಧರ್ಮೇಶ್ ಅವರನ್ನು ಜಯಶಾಲಿ ಎಂದು ಘೋಷಿಸಲಾಯಿತು.
ಬೆಂಬಲಿಗರಿಂದ ಸಂಭ್ರಮಾಚಾರಣೆ
ಧರ್ಮೇಶ್ ಸಿರಿಬೈಲ್ ಅವರು ಗೆಲುವು ದಾಖಲಿಸುತ್ತಿದ್ದಂತೆ ಅವರ ಬೆಂಬಲಿಗರು, ಹಿತೈಷಿಗಳು ಸಂಭ್ರಮಾಚರಣೆ ಮಾಡಿದರು. ಮತ ಎಣಿಕೆ ಕೇಂದ್ರದ ಮುಂದೆ ಕುವೆಂಪು ರಸ್ತೆಯಲ್ಲಿ ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿದರು. ಅಲ್ಲದೆ, ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆ ಧರ್ಮೇಶ್ ಅವರಿಗೆ ಹೂವಿನ ಹಾರ ಹಾಕಿ ಶುಭಾಶಯ ತಿಳಿಸಿದರು.
ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮತಗಳು?
ಧರ್ಮೇಶ್ | ಎಸ್.ಕುಮಾರ್ | |
ತೀರ್ಥಹಳ್ಳಿ | 3062 | 374 |
ಶಿವಮೊಗ್ಗ | 694 | 563 |
ಹೊಸನಗರ | 517 | 97 |
ಭದ್ರಾವತಿ | 1016 | 2184 |
ಕುಮಟಾ ಹೊನ್ನಾವರ | 518 | 269 |
ಯಾರೆಲ್ಲ ಎಷ್ಟು ಮತಗಳನ್ನು ಪಡೆದಿದ್ದಾರೆ?
ಶಿವಮೊಗ್ಗ – ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರ ಸ್ಥಾನಕ್ಕೆ ಒಂಭತ್ತು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ ಧರ್ಮೇಶ್ ಸಿರಿಬೈಲು ಮತ್ತು ಎಸ್.ಕುಮಾರ್ ಅವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಂಭತ್ತು ಅಭ್ಯರ್ಥಿಗಳು ಗಳಿಸಿರುವ ಮತಗಳ ಪಟ್ಟಿ.
ಅಭ್ಯರ್ಥಿ | ಪಡೆದ ಮತಗಳು |
ಕುಮಾರ್ | 026 |
ಎಸ್.ಕುಮಾರ್ | 3486 |
ಚೇತನಾ ಶ್ರೀಕಾಂತ್ ಹೆಗ್ಡೆ | 157 |
ಧರ್ಮೇಶ್ ಸಿರಿಬೈಲ್ | 5808 |
ನಾಗರಾಜ್ ಮಾವಿನಕೆರೆ | 14 |
ಡಾ. ರಜನಿಕಾಂತ್ | 93 |
ಕೆ.ಎಸ್.ರವಿಕುಮಾರ್ | 551 |
ಲೋಕೇಶ್ ಎಸ್.ವಿ | 1127 |
ಶಶಿಧರ್ ಹೆಚ್.ಡಿ. | 20 |
ಮತಗಳು ತಿರಸ್ಕೃತ
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ 11,348 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 66 ಮತಗಳು ತಿರಸ್ಕೃತವಾಗಿದೆ. ವಿವಿಧ ಕಾರಣಕ್ಕೆ ಮತಗಳು ತಿರಸ್ಕೃತವಾಗಿದ್ದು, ಎಣಿಕೆ ವೇಳೆ ಅವುಗಳನ್ನು ಪ್ರತ್ಯೇಕಿಸಲಾಗಿತ್ತು.
ಮತ ಎಣಿಕೆ ಕೇಂದ್ರದ ಮುಂದೆ ಯಾವುದೆ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
VIDEO NEWS