SHIVAMOGGA LIVE NEWS | 7 JUNE 2024
SHIMOGA : ರೈತ ಸಂಘ ಮತ್ತು ಹಸಿರು ಸೇನೆ, ಸಹ್ಯಾದ್ರಿ ರಂಗ ತರಂಗ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಜೂ.9ರಂದು ಸಂಜೆ 6 ಗಂಟೆಗೆ ಡೈರೆಕ್ಟ್ ಆಕ್ಷನ್ ನಾಟಕ (Drama) ಪ್ರದರ್ಶನ ಆಯೋಜಿಸಲಾಗಿದೆ. ಇದು ಪ್ರೊ. ಎಂ.ಡಿ.ನಂಜುಂಡಸ್ವಾಮಿ ಹೋರಾಟದ ಕಥೆಯ ನಾಟಕ ಎಂದು ನಾಟಕದ ನಿರ್ದೇಶಕ ಕಾಂತೇಶ ಕದರಮಂಡಲಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂತೇಶ ಕದರಮಂಡಲಗಿ, ನಟರಾಜ್ ಹುಳಿಯಾರ್ ಅವರು ನಾಟಕ ರಚಿಸಿದ್ದಾರೆ. ಕೆ.ಯುವರಾಜ್ ಅವರ ಗಾಯನ, ಮಂಜುನಾಥ ಕೂದುವಳ್ಳಿ ಬೆಳಕು ನೀಡಿದ್ದಾರೆ. ಡಾ. ನಾಗಭೂಷಣ್ ಅವರು ಪ್ರೊ. ನಂಜುಂಡಸ್ವಾಮಿ ಅವರ ಪಾತ್ರ ನಿರ್ವಹಿಸಲಿದ್ದಾರೆ. ಸುಂದರೇಶ್, ಕೆ.ಟಿ.ಗಂಗಾಧರ್ ಸೇರಿದಂತೆ ಹಲವರ ಪಾತ್ರಗಳು ನಾಟಕದಲ್ಲಿ ಕಾಣಸಿಗಲಿವೆ ಎಂದರು.
ಯಾರೆಲ್ಲ ಏನೇನು ಹೇಳಿದರು?
ಕೆ.ಟಿ.ಗಂಗಾಧರ್, ರೈತ ಮುಖಂಡ : ‘ನಮ್ಮ ಮನೆ ಜಪ್ತಿ ಮಾಡಿದರೆ ನಿಮ್ಮ ಮನೆ ಜಪ್ತಿ ಮಾಡುತ್ತೇವೆ ಅನ್ನುವ ಡೈರೆಕ್ಟ್ ಆಕ್ಷನ್ ರಾಜ್ಯದಲ್ಲಿತ್ತು. ರೈತರ ಮನೆ ಜಪ್ತಿ ಮಾಡಿದವರ ಮನೆಯನ್ನು ರೈತರು ಜಪ್ತಿ ಮಾಡುತ್ತಿದ್ದರು. ಇದು ಮೊದಲು ಶುರುವಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಭದ್ರಾವತಿ ತಹಶೀಲ್ದಾರ್ ಮನೆ ಜಪ್ತಿ ಮಾಡಿದ್ದೆ ಮೊದಲ ಪ್ರಕರಣ. ಅದೆಲ್ಲವು ನಾಟಕದಲ್ಲಿದೆ. ಎಲ್ಲ ವಿದ್ಯಾವಂತ ವರ್ಗ ನಾಟಕ ವೀಕ್ಷಿಸಬೇಕು. ಬೆಂಗಳೂರು, ಶಿವಮೊಗ್ಗ, ಹಾವೇರಿ, ಮೈಸೂರಿನಲ್ಲಿ ಪ್ರದರ್ಶನ ಆಗಿದೆ. ಮುಂದೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟದಲ್ಲಿ ಪ್ರದರ್ಶನ ಆಗಿದೆʼ
ಚಂದ್ರೇಗೌಡ, ಪತ್ರಕರ್ತ : ‘ಮೊದಲು ಬೆಂಗಳೂರಿನ ನಗ್ನ ಥಿಯೇಟರ್‌ನವರು ನಾಟಕ ಪ್ರದರ್ಶನ ಮಾಡಿದ್ದರು. ಶಿವಮೊಗ್ಗದ ಕಲಾವಿದರೆ ಅಭಿನಯಿಸಿದರೆ ಚನ್ನ ಅಂತಾ ಪ್ರಯತ್ನ ಶುರು ಮಾಡಿದೆವು. ಇದು ಪ್ರೊ. ನಂಜುಂಡಸ್ವಾಮಿ ಅವರ ಕರ್ಮಭೂಮಿ. ಸ್ವಾತಂತ್ರ್ಯ ನಂತರ ಶಾಸನ ಸಭೆಗೆ ಹೋದವರೆಲ್ಲ ರೈತರ ಮಕ್ಕಳು. ಆದರೂ ರೈತರ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ ಪ್ರೊ. ನಂಜುಂಡಸ್ವಾಮಿ ಅವರು ಕುರಿತು ಅರಿಯುವುದು ಇಂದಿಗು ಪ್ರಸ್ತುತ.ʼ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200