ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS
SHIMOGA | ತಡರಾತ್ರಿವರೆಗೂ ಹಾಡು, ಡಾನ್ಸ್, ಡಿಜೆಗೆ (DJ MUSIC) ಕುಣಿತ. ನಡು ಬೀದಿಯಲ್ಲಿ ಹೆಜ್ಜೆ ಹಾಕಿದ ಮಹಿಳೆಯರು, ಮಕ್ಕಳು. ಇದು ಹಿಂದೂ ಸಂಘಟನೆಗಳ ಮಹಾ ಮಂಡಳದ ಗಣಪತಿ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ.
ಸಾವಿರಾರು ಜನರ ಒಂದು ಗುಂಪು ಗಣಪತಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು. ಈ ಗುಂಪು ಗಣಪತಿ ಮೂರ್ತಿಯೊಂದಿಗೆ ಕೋಟೆ ರಸ್ತೆ, ಗಾಂಧಿ ಬಜಾರ್, ನೆಹರೂ ರಸ್ತೆವೆರಗೂ ಸಾಗಿತು. ಸಾವಿರಾರು ಜನರು ಗೋಪಿ ಸರ್ಕಲ್, ದುರ್ಗಿಗುಡಿಯಲ್ಲಿ ಜಮಾಯಿಸಿದ್ದರು.
ಗೋಪಿ ಸರ್ಕಲ್’ನಲ್ಲಿ ಡಿಜೆ ಅಬ್ಬರ
ಬಣ್ಣ ಬಣ್ಣದ ಬೆಳಕು, ಕೂಲ್ ಕ್ರ್ಯಾಕರ್ಸ್’ಗಳು, ಕವಿಗಡಚ್ಚಿಕ್ಕುವ ಸ್ಪೀಕರ್’ಗಳಿಂದ ಗೋಪಿ ಸರ್ಕಲ್ ರಂಗು ಪಡೆದಿತ್ತು. ಇಡೀ ಸರ್ಕಲ್’ನಲ್ಲಿ ಸಾವಿರಾರು ಯುವಕರು ಜಮಾಯಿಸಿದ್ದರು. ಡಿಜೆ ಸದ್ದಿಗೆ (DJ MUSIC) ಹೆಜ್ಜೆ ಹಾಕಿದರು. ಸ್ಥಳೀಯ ಕಲಾವಿದರು ವಿವಿಧ ಹಾಡುಗಳು, ಮ್ಯೂಸಿಕ್ ಪ್ರದರ್ಶಿಸಿ ಯುವಕರಲ್ಲಿ ಸ್ಪೂರ್ತಿ ತುಂಬಿದರು. ಮಧ್ಯಾಹ್ನದಿಂದಲೇ ಡಿಜೆ ಆರಂಭವಾಗಿತ್ತು.
ದುರ್ಗಿಗುಡಿಯಲ್ಲೂ ಭರ್ಜರಿ ಸ್ಟೆಪ್ಸ್
ಇತ್ತ ದುರ್ಗಿಗುಡಿ ರಸ್ತೆ ಉದ್ದಕ್ಕೂ ವಿವಿಧ ಸಂಘಟನೆಗಳು, ಸಂಸ್ಥೆಗಳ ವತಿಯಿಂದ ಸ್ಪೀಕರ್’ಗಳನ್ನು ಅಳವಡಿಸಿ ಹಾಡು ಪ್ರಸಾರ ಮಾಡಲಾಯಿತು. ಅಲ್ಲಲ್ಲಿ ಗುಂಪು ಸೇರಿದ ಜನರು ಡಾನ್ಸ್ ಮಾಡಿ ಸಂಭ್ರಮಿಸಿದರು. ಮಹಿಳೆಯರು, ಮಕ್ಕಳು ಕೂಡ ತಡರಾತ್ರಿವರೆಗೂ ಸ್ಟೆಪ್ಸ್ ಹಾಕಿ ಖುಷಿ ಪಟ್ಟರು.
ಜೈಲ್ ಸರ್ಕಲ್ ರಂಗು ರಂಗು
ಇನ್ನೊಂದೆಡೆ ಜೈಲ್ ಸರ್ಕಲ್ ಕೂಡ ರಂಗು ಪಡೆದುಕೊಂಡಿತ್ತು. ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿದರು. ಗಣಪತಿ ಮೆರವಣಿಗೆ ಜೈಲ್ ಸರ್ಕಲ್ ತಲುಪುವವರೆಗೂ ಹಾಡು, ಡಾನ್ಸ್ ಮುಂದುವರೆದಿತ್ತು.
ಕುವೆಂಪು ರಸ್ತೆಯಲ್ಲಿಯೂ ಸಂಭ್ರಮ
ಸದಾ ವಾಹನ ದಟ್ಟಣೆ ಇರುತ್ತಿದ್ದ ಕುವೆಂಪು ರಸ್ತೆಯಲ್ಲಿಯು ಸಂಭ್ರಮವಿತ್ತು. ನಂಜಪ್ಪ ಆಸ್ಪತ್ರೆ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿತ್ತು. ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ಹಾಡು, ತಮಟೆ ಸದ್ದಿಗೆ ಡಾನ್ಸ್ ಮಾಡಿದರು. ಹಿಂದೂ ಮಹಾಸಭಾ ಗಣಪತಿಗೆ ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಪೂಜೆ ಸಲ್ಲಿಸಿ, ಬೃಹತ್ ಹೂವಿನ ಹಾರ ಸಮರ್ಪಿಸಿದರು.





ಕ್ಲಿಕ್ ಮಾಡಿ ಇದನ್ನೂ ಓದಿ | ಬೆಳಗಿನ ಜಾವದವರೆಗೂ ಮೆರವಣಿಗೆ, ವಿಸರ್ಜನೆ ವಿಡಿಯೋ ವೈರಲ್
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು







