ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 23 MAY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಹೊಸಮನೆ ಬಡಾವಣೆಯ ದೊಡ್ಡಮ್ಮ ಜಲದುರ್ಗಮ್ಮ ದೇವಿ ಜಾತ್ರೆ (Jathre) ಮಹೋತ್ಸವ ಮತ್ತು ಕೆಂಡಾರ್ಚನೆ ಮಹೋತ್ಸವ ಶ್ರದ್ಧೆ ಭಕ್ತಿಯಿಂದ ನಡೆಯಿತು. ದೊಡ್ಡ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಇದನ್ನೂ ಓದಿ – ಭದ್ರಾವತಿಯಲ್ಲಿ ಗಂಗೆ ಪೂಜೆಗೆ ತರೆಳಿದ್ದವರ ಮೇಲೆ ಹೆಜ್ಜೇನು ದಾಳಿ
ಜಾತ್ರಾ ಮಹೋತ್ಸವದ ಅಂಗವಾಗಿ ದೇವರ ಉತ್ಸವ ಮೆರವಣಿಗೆ ನಡೆಯಿತು. ಹಲವು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಂಡಾರ್ಚನೆ ಮಹೋತ್ಸವಕ್ಕೆ ಕಲತ್ತಗಿರಿಯಿಂದ ಪಾದಯಾತ್ರೆ ಮೂಲಕ ಜಲದುರ್ಗಮ್ಮ ಮತ್ತು ಗಂಗೆಯನ್ನು ಹೊತ್ತು ತರಲಾಗಿತ್ತು. ಬಳಿಕ ಶ್ರದ್ಧೆ ಭಕ್ತಿಯಿಂದ ಕೆಂಡಾರ್ಚನೆ ನಡೆಯಿತು. ಶಿವಮೊಗ್ಗ ಮತ್ತು ರಾಜ್ಯದ ವಿವಿಧೆಡೆಯ ಭಕ್ತರು ಭಾಗವಹಿಸಿದ್ದರು. ಜಾತ್ರೆ ಅಂಗವಾಗಿ ದೇಗುಲದಲ್ಲಿ ಚಂಡಕಾಯಾಗ, ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.