ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 JUNE 2024
SHIMOGA : ನಗರದ ವಿವಿಧೆಡೆ ಒಳ ಚರಂಡಿಯ ಚೇಂಬರ್ ಕ್ಯಾಪ್‌ಗಳು (Caps) ಅಪಾಯಕಾರಿ ಸ್ಥಿತಿಯಲ್ಲಿವೆ. ಬಹು ಸಮಯದಿಂದ ಇದೇ ಸ್ಥಿತಿಯಲ್ಲಿದ್ದರೂ ಸರಿಪಡಿಸುವ ಪ್ರಯತ್ನವಾಗಿಲ್ಲ. ಇದರಿಂದ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಾ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರಕರಣ 1 : ಶಿವಮೊಗ್ಗದ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಯ ಪಕ್ಕದ ಸೀರೆ ಅಂಗಡಿ ಎದುರು ಚೇಂಬರ್ ಕ್ಯಾಪ್ ಸಮಸ್ಯೆಯಾಗಿದೆ. ಇಲ್ಲಿ ಆಗಾಗ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಹಾಗಾಗಿ ಸ್ಥಳೀಯರೆ ಫ್ಲೆಕ್ಸ್, ಕೋಲುಗಳನ್ನು ಕಟ್ಟಿ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಪ್ರಕರಣ 2 : ದುರ್ಗಿಗುಡಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಮುಂಭಾಗ ರಸ್ತೆಯಲ್ಲಿ ಚೇಂಬರ್ ಕ್ಯಾಪ್ ಹಾನಿಯಾಗಿದೆ. ನಾಲ್ಕು ರಸ್ತೆ ಕೂಡುವಲ್ಲಿ ರಸ್ತೆ ಮಧ್ಯದಲ್ಲೇ ಚೇಂಬರ್ ಮುಚ್ಚಳ ಹೀಗಿದೆ. ಆಚೀಚೆ ನಾಲ್ಕು ಕಲ್ಲು ಇಟ್ಟು ವಾಹನ ಸವಾರರಿಗೆ ಎಚ್ಚರಿಸುವ ಕೆಲಸವಾಗುತ್ತಿದೆ.
ಪ್ರಕರಣ 3 : ನಗರದ ಶಂಕರಮಠ ರಸ್ತೆಯಲ್ಲಿ ಶೃತಿ ಮೋಟರ್ಸ್ ಮುಂಭಾಗ ಚೇಂಬರ್ ಕ್ಯಾಪ್ ಹಾನಿಗೀಡಾಗಿ ತಿಂಗಳುಗಳೆ ಕಳೆದಿವೆ. ಆದರೆ ಈತನಕ ರಿಪೇರಿ ಕೆಲಸವಾಗಿಲ್ಲ. ವಾಹನ ಸವಾರರು ವೇಗವಾಗಿ ಬಂದರೆ ಇಲ್ಲಿ ಅಪಘಾತ ಖಚಿತ.
‘ರಸ್ತೆ ಮಧ್ಯೆ ಚೇಂಬರ್ ನಿರ್ಮಿಸಿದ್ದಾರೆ. ಇವುಗಳ ಮುಚ್ಚಳಗಳು ಹಾಳಾಗಿದ್ದರು ರಿಪೇರಿ ಮಾಡಿಸುವ ಪ್ರಯತ್ನ ಮಾಡುತ್ತಿಲ್ಲ. ಬೈಕ್ ಸವಾರರು ಸ್ವಲ್ಪ ಯಾಮಾರಿದರೆ ಕೈ ಕಾಲು ಮುರಿದುಕೊಳ್ಳಬೇಕಾಗುತ್ತದೆ. ಕೆಲವು ರಸ್ತೆಗಳಲ್ಲಿ ಚೇಂಬರ್ ಮುಚ್ಚಳಗಳು ಇರುವಲ್ಲಿ ಗುಂಡಿಗಳಂತೆ ಮಾಡಿದ್ದಾರೆ. ಶಂಕರಮಠದ ಎದುರಿಗೆ ಚೇಂಬರ್ ಮುಚ್ಚಳವನ್ನು ಉಬ್ಬಿಕೊಂಡಂತೆ ನಿರ್ಮಿಸಿದ್ದಾರೆ. ರಸ್ತೆಯಲ್ಲಿ ಹೀಗೆ ನಿರ್ಮಿಸುವುದು ಎಷ್ಟು ಸರಿ?ʼಗಂಗಾಧರ್, ಅಟೋ ಚಾಲಕ
ಚೇಂಬರ್ ಕ್ಯಾಪ್‌ಗಳಿಂದಾಗಿ ವಾಹನ ಸವಾರರು ಆತಂಕಕ್ಕೀಡಾಗಿದ್ದಾರೆ. ಹಾಗಿದ್ದೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422