ಶಿವಮೊಗ್ಗದ ಲೈವ್.ಕಾಂ | SHIMOGA NEWS | 23 ಫೆಬ್ರವರಿ 2022
ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನೆಲೆ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ಈ ನಡುವೆ ನಗರ ವ್ಯಾಪ್ತಿಯಲ್ಲಿ ಹದ್ದಿನ ಕಣ್ಣಿಡಲು ಡ್ರೋಣ್’ಗಳು ಆಗಮಿಸಿವೆ.
ಉಡುಪಿ ಜಿಲ್ಲೆಯ ಕಾರ್ಕಳದಿಂದ ಈ ಡ್ರೋಣ್’ಗಳು ಶಿವಮೊಗ್ಗ ನಗರಕ್ಕೆ ತರಿಸಲಾಗಿದೆ. ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಪಡೆ ಈ ಡ್ರೋಣ್’ಗಳ ಬಳಕೆ ಮಾಡುತ್ತಿದೆ. ಎರಡು ಡ್ರೋಣ್’ಗಳು ಈಗ ಶಿವಮೊಗ್ಗ ನಗರದ ಮೇಲೆ ಹಾರಾಡುತ್ತಿವೆ.
ಈ ಡ್ರೋಣ್’ಗಳ ವಿಶೇಷತೆ ಏನು?
» ಇವು ನೇತ್ರಾ ವಿ ಸೀರಿಸ್’ನ ಡ್ರೋಣ್’ಗಳಾಗಿವೆ. ಇವು ಸುಮಾರು ಆರು ಕೆ.ಜಿ ತೂಗುತ್ತವೆ.
» 5 ಕಿ.ಮೀ ಸುತ್ತಳತೆಯಲ್ಲಿ, 500 ಮೀಟರ್ ಎತ್ತರದಲ್ಲಿ ಹಾರಾಟ ನಡೆಸುವ ಸಾಮಾರ್ಥ್ಯ ಹೊಂದಿವೆ.
» ಈ ಡ್ರೋಣ್’ನಲ್ಲಿ ಮೂರು ಬ್ಯಾಟರಿಗಳಿವೆ. ಪ್ರತಿ ಬ್ಯಾಟರಿಯು ಒಂದು ಗಂಟೆ ಹಾರಾಟಕ್ಕೆ ಅನುವು ಮಾಡಲಿದೆ.
» ಹಾರಾಡುತ್ತಿರುವಾಗಲೆ ಚಾರ್ಜ್ ಖಾಲಿಯಾದರೆ, ಎಲ್ಲಿಂದ ಹಾರಾಟ ಆರಂಭಿಸಿತ್ತೋ ಅಲ್ಲಿ ಬಂದು ಇಳಿಯಲಿದೆ.
» ಡ್ರೋಣ್ ನಿರ್ವಹಣೆಗೆ ಗ್ರೌಂಡ್ ಕಂಟ್ರೋಲ್ ಸ್ಟೇಷನ್ (ಜಿಸಿಎಸ್) ಇರಲಿದೆ. ಇದರ ಮೂಲಕ ಡ್ರೋಣ್’ಗೆ ಸಿಗ್ನಲ್ ತಲುಪಲಿದೆ.
» 1200 ಮೆಗಾ ಪಿಕ್ಸಲ್ ಕ್ಯಾಮರಾಗಳಿವೆ. ಇದರಲ್ಲಿ ಸೆರೆಯಾದ ದೃಶ್ಯ ವೀಕ್ಷಿಸಲು ಪ್ರತ್ಯೇಕ ಎಲ್.ಸಿ.ಡಿ ಇದೆ.
ಎರಡು ಡ್ರೋಣ್, ಐವರ ತಂಡ
ಎಎನ್ಎಫ್ ತಂಡದ ಐವರು ಕಾರ್ಕಳದಿಂದ ಎರಡು ಡ್ರೋಣ್ ತಂದಿದ್ದಾರೆ. ನಗರ ವ್ಯಾಪ್ತಿಯಲ್ಲಿ ತುರ್ತು ಇರುವ ಕಡೆಯಲ್ಲಿ ಡ್ರೋಣ್ ಹಾರಾಟ ಮಾಡಿ ದೃಶ್ಯಗಳನ್ನು ಸೆರೆ ಹಿಡಿಯಲಿದೆ. ಇವತ್ತು ಅಶೋಕ ಸರ್ಕಲ್’ನಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಹಾರಾಟ ನಡೆಸಲಾಯಿತು. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಡ್ರೋಣ್ ಪರಿಶೀಲನೆ ನಡೆಸಿದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಕರ್ಫ್ಯೂ ಅವಧಿ ಮತ್ತೊಂದು ದಿನಕ್ಕೆ ವಿಸ್ತರಣೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200