SHIVAMOGGA LIVE NEWS
SHIMOGA | ಮನೆಯ ಗೋಡೆಗಳಲ್ಲಿ ವಿದ್ಯುತ್ ಪ್ರವಹಿಸಿ (SHOCK), ಮಹಿಳೆಯೊಬ್ಬರಿಗೆ ಶಾಕ್ ಹೊಡೆದಿದೆ. ಸ್ಮಾರ್ಟ್ ಸಿಟಿ ಯೋಜನೆಯ ವಿದ್ಯುತ್ ಸಂಪರ್ಕದಿಂದಲೆ ಈ ಸಮಸ್ಯೆಯಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಹೊಸಮನೆ ಬಡಾವಣೆಯ ಚಾನಲ್ ಬಲ ಭಾಗದ ಎರಡನೆ ತಿರುವಿನಲ್ಲಿರುವ ಮನೆಗಳ ಗೋಡೆಯಲ್ಲಿ ವಿದ್ಯುತ್ ಪ್ರವಹಿಸಿದೆ. ಮಹಿಳೆಯೊಬ್ಬರಿಗೆ ಕರೆಂಟ್ ಶಾಕ್ (SHOCK) ಹೊಡೆದಿದೆ ಎನ್ನಲಾಗುತ್ತಿದೆ.
ಗೋಡೆ ಮುಟ್ಟಲು, ಓಡಾಡಲು ಆತಂಕ (SHOCK)
ಮನೆಗಳ ಗೋಡೆ ಮುಟ್ಟಿದಾಗ ಮೈ ಜುಮ್ ಅನಿಸಿದ್ದರಿಂದ ಜನರು ಆತಂಕಕ್ಕೀಡಾದರು. ಮನೆಯಲ್ಲಿರುವ ವಸ್ತುಗಳನ್ನು ಮುಟ್ಟಲು ಹೆದರಿದರು. ಲೈಟ್ ಹಾಕಲು ಅಥವಾ ಆರಿಸುವಾಗ ಸ್ವಚ್ ಗಳನ್ನು ಮುಟ್ಟುವಾಗಲು ಜನ ಭಯಗೊಂಡಿದ್ದರು. ಘಟನೆ ಕುರಿತು ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು.
ಅಧಿಕಾರಿಗಳು ಸ್ಥಳಕ್ಕೆ ದೌಡು (SHOCK)
ಮುಖಂಡ ಕೆ.ರಂಗನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಮಾರ್ಟ್ ಸಿಟಿ ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಮಾರ್ಗದಲ್ಲಿ ಸಮಸ್ಯೆ ಉಂಟಾಗಿರುವುದು ಕಂಡು ಬಂದಿದೆ.
ಕರೆಂಟ್ ಶಾಕ್ ಹೊಡೆಯಲು ಕಾರಣವೇನು?
ಈ ಕುರಿತು ವಾಟ್ಸಪ್ ಮೂಲಕ ಪ್ರತಿಕ್ರಿಯೆ ನೀಡಿರುವ ಮುಖಂಡ ಕೆ.ರಂಗನಾಥ್ ಅವರು, ಹೊಸಮನೆ ಬಡಾವಣೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆದಿದೆ. ವಿದ್ಯುತ್ ಕೇಬಲ್ ಸಂಪರ್ಕ ಕೊಡುತ್ತಿದ್ದಾರೆ. ಫೀಡರ್ ಫೀಲ್ ಬಾಕ್ಸ್ ಗಳಿಂದ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಹಲವು ಕೇಬಲ್ ಗಳು ಡ್ಯಾಮೇಜ್ ಆಗಿದೆ. ಆವೈಜ್ಞಾನಿಕತೆಯಿಂದ ಕೂಡಿರುವ ಕಾಮಗಾರಿಯಿಂದ ಜನರು ಭಯಭೀತರಾಗಿದ್ದಾರೆ. ಅಧಿಕಾರಿಗಳು, ಗುತ್ತಿಗೆದಾರರು ಜನರ ಜೀವದ ಜೊತೆ ಚೆಲ್ಲಾಟ ವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎರಡನೆ ತಿರುವಿನಲ್ಲಿ ವಿದ್ಯುತ್ ಪ್ರವಹಿಸಿರುವ ವಿಚಾರ ತಿಳಿದು, ಉಳಿದ ರಸ್ತೆಯ ನಿವಾಸಿಗಳು ಆತಂಕಕ್ಕೀಡಾಗಿದ್ದರು. ರಾತ್ರಿ ಮನೆಗಳಲ್ಲಿ ಗೋಡೆಗಳನ್ನು ಮುಟ್ಟುವಾಗ ಭಯಪಡುವಂತಾಗಿತ್ತು.
ಕ್ಲಿಕ್ ಮಾಡಿ ಇದನ್ನೂ ಓದಿ | ಮಕ್ಕಳ ಕಳ್ಳನೆಂದು ಯುವಕನಿಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದರು, ವಿಚಾರಣೆ ವೇಳೆ ಅಸಲಿ ಸಂಗತಿ ಬಯಲು
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.