ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಆಗಸ್ಟ್ 2020
ಮತಾಂಧರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಉತ್ತರ ಪ್ರದೇಶ ಮಾದರಿಯಲ್ಲಿ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಬೆಂಗಳೂರು ಗಲಭೆ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಮತಾಂಧ ಮುಸ್ಲಿಮರ ಗೂಂಡಾಗಿರಿ, ದೊಂಬಿಯನ್ನು ಇತರ ಮುಸ್ಲಿಮ್ ಮುಖಂಡರು ಖಂಡಿಸಬೇಕು. ಹಾಗಾಂತ ಎಲ್ಲಾ ಮುಸ್ಲಿಮರು ಗೂಂಡಾಗಳಲ್ಲ. ಈ ಸಮುದಾಯದಲ್ಲೂ ಸೌಮ್ಯ ಸ್ವಭಾವದವರು ಇದ್ದಾರೆ ಎಂದರು.
ಮನಸಿಗೆ ಬಹಳ ನೋವಾಗಿದೆ
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ, ಕಚೇರಿಯನ್ನು ಧ್ವಂಸ ಮಾಡಲಾಗಿದೆ. ಇದು ನನ್ನ ಮನಸಿಗೆ ಬಹಳ ನೋವು ತಂದಿದೆ. ದಾಂಧಲೆ ನಡೆಸಿದವರಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕೈವಾಡದ ಶಂಕೆ
ಇನ್ನು, ಈ ಕೃತ್ಯದ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಇರುವ ಕುರಿತು ಶಂಕೆ ಇದೆ. ಪ್ರಜಾಪ್ರಭುತ್ವದ ಮೇಲಿನ ಹಕ್ಕನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ ಎಂದು ಸಚಿವ ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದರು.
ಎಸ್ಡಿಪಿಐ ಜುಜುಬಿ ಸಂಘಟನೆ
ಎಸ್ಡಿಪಿಐ ಒಂದು ಜುಜುಬಿ ಸಂಘಟನೆ. ಇದನ್ನು ನಮ್ಮ ಸರ್ಕಾರ ಮಟ್ಟ ಹಾಕುತ್ತದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು. ದಾಂಧಲೆ, ಗಲಭೆ ಮಾಡಿ ಜೈಲಿಗೆ ಹೋಗುವವರ ಬಗ್ಗೆ ನಾನು ಕೇಳಿದ್ದೆ. ಜೈಲಿಗೆ ಹೋಗಿ ಬರುವುದೆ ಇವರಿಗೆ ಕೆಲಸವಾಗಿಬಿಟ್ಟಿದೆ. ಈ ಮತಾಂಧರನ್ನು ಬಗ್ಗುಬಡಿಯದೆ ಹೋದರೆ ಮುಂದೆ ನಮ್ಮ ಮನೆಗೂ ಬೆಂಕಿ ಹಚ್ಚುವಂಥ ಸ್ಥಿತಿ ಬರುತ್ತದೆ ಎಂದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]