‘ನಂದೇ ಒರಿಜಿನಲ್‌ ಬಿಜೆಪಿ, ನಾನು ಎ ಟೀಮ್‌, ಈಗ ನಾನು ಕಾಯುತ್ತಿರುವುದು ಒಂದೇ ವಿಷಯಕ್ಕೆ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 APRIL 2024

SHIMOGA : ಈಶ್ವರಪ್ಪ ಅವರದ್ದು ಬಿಜೆಪಿ ಬಿ ಟೀಮ್‌ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಅವರು ತಮ್ಮ ಹೇಳಿಕೆ ತಿದ್ದಿಕೊಳ್ಳಬೇಕು. ಶೇ.60ರಷ್ಟು ಬಿಜೆಪಿ ಕಾರ್ಯಕರ್ತರು ತಮ್ಮೊಂದಿಗೆ ಇದ್ದಾರೆ. ಹಾಗಾಗಿ ತಮ್ಮದೇ ಒರಿಜಿನಲ್‌ ಬಿಜೆಪಿ ಎಂದು ಲೋಕಸಭೆ ಚುನಾವಣೆ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ.ರಾಘವೇಂದ್ರ ಅವರದ್ದು ಬಿ ಟೀಮ್.‌ ಹೊಂದಾಣಿಕೆ ಕಾರಣಕ್ಕೆ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯು ಹೊಂದಾಣಿಕೆಯಾಗಿತ್ತು. ಈಗಲೂ ಆಗಿದೆ. ಆದರೆ ನಾನು ಸಾಯುವವರೆಗೆ ಎ ಟೀಮ್‌. ಬಿಜೆಪಿಯಲ್ಲೆ ಇರುತ್ತೇನೆ ಎಂದರು.

ಈಶ್ವರಪ್ಪ ಅಂದಾಕ್ಷಣ ಜನರು ಬಿಜೆಪಿ ಎಂದುಕೊಳ್ಳುತ್ತಾರೆ. ಆದರೆ ನಾನು ಈಗ ಸ್ವತಂತ್ರ ಅಭ್ಯರ್ಥಿ. ಸದ್ಯ ಚುನಾವಣ ಚಿಹ್ನೆಗಾಗಿ ಕಾಯುತ್ತಿದ್ದೇನೆ. ಚಿಹ್ನೆ ಸಿಕ್ಕ ಬಳಿಕ ಕಾರ್ಯಕರ್ತರು ಎಲ್ಲ ಮತದಾರರಿಗು ತಲುಪಿಸುತ್ತಾರೆ ಎಂದರು.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಬೆಳಗಿನ ಜಾವ ಪೊಲೀಸರ ದಾಳಿ, ಮನೆಗಳಲ್ಲಿ ಶೋಧ, ಕಾರಣವೇನು? ಎಲ್ಲೆಲ್ಲಿ ನಡೆಯಿತು ದಾಳಿ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment