
ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಅಕ್ಟೋಬರ್ 2020
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಕೃಷಿ ಉತ್ಪನ್ನ ಮಾರುಕಟ್ಟೆ, ಭೂ ಸುಧಾರಣೆ, ಭೂಸ್ವಾಧೀನ ಕಾಯ್ದೆಗಳಿಎ ತಿದ್ದುಪಡಿ ತಂದಿರುವುದನ್ನು ಹೊರಟಿರುವುದನ್ನು ಖಂಡಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಜನಶಕ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಗೋಪಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಕೃಷಿ ಮಾರುಕಟ್ಟೆ, ಕೃಷಿ ಭೂಮಿ ಮತು ಭೂ ಸುಧಾರಣೆ, ಭೂ ಸ್ವಾಧೀನ ತಿದ್ದುಪಡಿ ಮಸೂದೆಗಳನ್ನು ಕಾನೂನು ಮಾಡಲು ಹೊರಟಿರುವ ತೀರ್ಮಾನದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಗಾಂಧಿ ಜಯಂತಿ ಅಂಗವಾಗಿ ಸತ್ಯಾಗ್ರಹ ನಡೆಸಿದ ಹೋರಾಟಗಾರರು, ಗ್ರಾಮೀಣ ಭಾರತದ ಗಾಂಧೀ ಕಂಡ ಗ್ರಾಮ ಭಾರತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಶಪಡಿಸಿ ಕಾರ್ಪೋರೇಟ್ ಕಂಪೆನಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ರಾಷ್ಟ್ರ ವಾಗಿ ಪರಿವರ್ತಿಸಲು ಕೈಗೊಂಡ ತೀರ್ಮಾನ ಕೃಷಿ ವಲಯಕ್ಕೆ ಅತ್ಯಂತ ಅಪಾಯಕಾರಿ ಯಾಗಿದೆ ಎಂದು ಹೇಳಿದರು.
ಸತ್ಯಾಗ್ರಹದಲ್ಲಿ ಮುಖಂಡರಾದ ಹೆಚ್.ಆರ್.ಬಸವರಾಜಪ್ಪ, ಕೆ.ಎಲ್.ಅಶೋಕ್, ಕೆ.ಪಿ.ಶ್ರೀಪಾಲ್, ಹಿಟ್ಟೂರು ರಾಜು, ಡಿ.ಎಸ್.ಶಿವ ಕುಮಾರ್, ಇ.ಬಿ.ಜಗದೀಶ್, ಎಸ್.ಶಿವಮೂರ್ತಿ, ಪಿ.ಡಿ.ಮಂಜಪ್ಪ, ಡಿ.ಹೆಚ್.ರಾಮಚಂದ್ರಪ್ಪ, ಕೆ.ರಾಘವೇಂದ್ರ, ಸಿ.ಚಂದ್ರಪ್ಪ, ಜಿ.ವಿ.ರವೀಂದ್ರ ಸೇರಿದಂತೆ ಹಲವರಿದ್ದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ಶಿವಮೊಗ್ಗ ಜಿಲ್ಲೆಯಲ್ಲಿ ಮೈ ಸುಡುವ ಬಿಸಿಲಿನ ಜೊತೆಗೆ ಮೈ ನಡುಗಿಸುವ ಚಳಿ, ಇವತ್ತಿನ ಹವಾಮಾನ ವರದಿ

- ಶಿವಮೊಗ್ಗ ತಾಲೂಕಿನ ಹಲವೆಡೆ ಫೆಬ್ರವರಿ 8, 9 ರಂದು ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ನಂಜಪ್ಪ ಆಸ್ಪತ್ರೆಯಲ್ಲಿ ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್, ಏನಿದು? ಹೇಗೆ ನಡೆಯಿತು ಪ್ರಕ್ರಿಯೆ?

- ಶಿವಮೊಗ್ಗ ಬೈಪಾಸ್ನಲ್ಲಿ ಧಗಧಗ ಉರಿದ ಮಳಿಗೆ, ವಸ್ತುಗಳು ಸ್ಪೋಟ, ಏನೇನಾಯ್ತು?

- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

About The Editor
ನಿತಿನ್ ಆರ್.ಕೈದೊಟ್ಲು






