ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಜನವರಿ 2022
ಹಳೆ ಸೇತುವೆ ಮೇಲಿಂದ ತುಂಗಾ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ರಕ್ಷಣೆ ಮಾಡಿದ, ಟ್ರಾಫಿಕ್ ಠಾಣೆ ಎಎಸ್ಐ ಮತ್ತು ಆಟೋ ಚಾಲಕರನ್ನು ಸನ್ಮಾನಿಸಲಾಯಿತು. ಶಿವಮೊಗ್ಗ NSUI ಘಟಕದ ವತಿಯಿಂದ ಸನ್ಮಾನ ಕಾರ್ಯ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪೂರ್ವ ಸಂಚಾರಿ ಠಾಣೆ ಆವರಣದಲ್ಲಿ ಎಎಸ್ಐ ಶ್ರೀನವಾಸ್, ಆಟೋ ಚಾಲಕರಾದ ಅರ್ಜುನ್ ಮತ್ತು ಕಾಂತ ಅವರನ್ನು ಸನ್ಮಾನಿಸಲಾಯಿತು.
ಗುರುವಾರ ರಾತ್ರಿ ಮಂಜುನಾಥ ಎಂಬಾತ ಹಳೆ ಸೇತುವೆ ಮೇಲಿಂದ ತುಂಗಾ ಹೊಳೆಗೆ ಜಿಗಿದಿದ್ದ. ಆತ್ಮಹತ್ಯೆಗೆ ಯತ್ನಿಸಿದ್ದ ಈತ ಸೇತುವೆಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ. ಇದನ್ನು ಗಮನಿಸಿದ ಎಎಸ್ಐ ಶ್ರೀನಿವಾಸ್, ಆಟೋ ಚಾಲಕರಾದ ಅರ್ಜುನ್ ಮತ್ತು ಕಾಂತಾ ಅವರು ಮಂಜುನಾಥನನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದರು.
ಈ ಹಿನ್ನೆಲೆಯಲ್ಲಿ NSUI ಸಂಘಟನೆ ವತಿಯಿಂದ ಮೂವರನ್ನು ಸನ್ಮಾನಿಸಲಾಯಿತು. ದಕ್ಷಿಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಿರಂಜೀವಿ ಬಾಬಣ್ಣ, ರಾಜ್ಯ NSUI ಕಾರ್ಯದರ್ಶಿ ಎಚ್.ಎಸ್ ಬಾಲಾಜಿ, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜು ಪುರಲೆ, ಪ್ರಮುಖರಾದ ಅನ್ನು, ಪ್ರಮೋದ್, ಸಂದೀಪ್ ಅಟೋಕ್, ಮಂಜು, ಲಕ್ಷ್ಮಣ್, ಗಿರೀಶ್, ಪದ್ಮನಾಭ್, ಚಂದನ್, ವಿಜಯ್ ಸೇರಿದಂತೆ ಹಲವರು ಇದ್ದರು.