ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 23 ನವೆಂಬರ್ 2019
ಶಿವಮೊಗ್ಗದ ಸಿಟಿ ಬಸ್ಸುಗಳಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಭಾರಿ ದಂಡ ಹಾಕಿ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಸಿಟಿ ಬಸ್’ಗಳಿಗೆ ದಂಡ ಏಕೆ?
ನಿಗದಿಪಡಿಸಿದ ಸ್ಥಳಗಳಲ್ಲಿ ಬಸ್ಸುಗಳನ್ನು ನಿಲ್ಲಿಸುವ ಬದಲು, ಎಲ್ಲೆಂದರಲ್ಲಿ ಸ್ಟಾಪ್ ಕೊಡಲಾಗುತ್ತಿತ್ತು. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಶಿವಮೊಗ್ಗ ಸಿಟಿಯ ಸಂಚಾರ ಪೊಲೀಸರು ಸಿಟಿ ಬಸ್ಸುಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಭಾರಿ ದಂಡ ವಸೂಲಿ
ಶಿವಮೊಗ್ಗದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸರು ಎರಡು ದಿನ ನಿರಂತರವಾಗಿ ದಂಡ ವಿಧಿಸಿದ್ದಾರೆ. ಮೊದಲ ದಿನ 12,500, ಎರಡನೇ ದಿನ 8,700 ರೂ. ದಂಡ ವಿಧಿಸಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು ದಂಡ ಹಾಕಲಾಗಿದೆ
ನವೆಂಬರ್ 21ರಂದು 25 ಬಸ್ಸುಗಳ ವಿರದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪಶ್ಚಿಮ ಸಂಚಾರಿ ಠಾಣೆಯಲ್ಲಿ ಆರು ಪ್ರಕರಣ ದಾಖಲಿಸಿ, 4500 ರೂ. ಫೈನ್ ಹಾಕಲಾಗಿದೆ. ಪೂರ್ವ ಸಂಚಾರಿ ಠಾಣೆಯಲ್ಲಿ 19 ಪ್ರಕರಣ ದಾಖಲಿಸಿ 8 ಸಾವಿರ ದಂಡ ವಿಧಿಸಲಾಗಿದೆ.
ನವೆಂಬರ್ 22ರಂದು ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ, 18 ಸಿಟಿ ಬಸ್ಸುಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು 8,700 ರೂ. ದಂಡ ವಸೂಲು ಮಾಡಲಾಗಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Shimoga Traffic Police fined city buses for violating traffic rules in the city. Around 30 buses have been fined by the police.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422