ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆದವರ ಮೇಲಷ್ಟೆ ಅಲ್ಲ, ಹಾಕಿದವರ ಮೇಲೂ ಬಿತ್ತು ಕೇಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

ಶಿವಮೊಗ್ಗ| ಸಾವರ್ಕರ್ ಫ್ಲೆಕ್ಸ್ ವಿವಾದದಿಂದಾಗಿ (CONTROVERSY) ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಮೀರ್ ಅಮಹದ್ ಸರ್ಕಲ್’ನಲ್ಲಿ ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆದವರ ಮೇಲಷ್ಟೆ ಅಲ್ಲ, ಫ್ಲೆಕ್ಸ್ ಅಳವಡಿಸಿದವರ ವಿರುದ್ಧವು ಪ್ರಕರಣ ದಾಖಲಾಗಿದೆ.

Shimoga Nanjappa Hospital

ಎಲ್ಲರೂ ಅಪರಿಚಿತರೆ..!

ಅಮೀರ್ ಅಮಹದ್ ಸರ್ಕಲ್ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡಲಿದೆ. ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಮತ್ತು ಅದನ್ನು ತೆರವು ಮಾಡಿದವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಎರಡು ಪ್ರತ್ಯೇಕ ಎಫ್ಐಆರ್’ಗಳಲ್ಲಿ ಎಲ್ಲರೂ ಅಪರಿಚಿತರು ಎಂಬಂತೆ ತೋರಿಸಲಾಗಿದೆ.

ಫ್ಲೆಕ್ಸ್ ಅಳವಡಿಸಿದವರ ವಿರುದ್ಧ ಕೇಸ್

ಆಗಸ್ಟ್ 15ರಂದು ಮಧ್ಯಾಹ್ನ 2.30ರ ಹೊತ್ತಿಗೆ 8 ರಿಂದ 10 ಜನರು ಸಾವರ್ಕರ್ ಫ್ಲೆಕ್ಸ್ ಹಿಡಿದು ಅಮೀರ್ ಅಹಮದ್ ಸರ್ಕಲ್’ಗೆ ಬಂದಿದ್ದಾರೆ. ಸರ್ಕಲ್’ನಲ್ಲಿರುವ ಕಂಬಕ್ಕೆ ಫ್ಲೆಕ್ಸ್ ಕಟ್ಟಲು ಇವರು ಮುಂದಾಗಿದ್ದಾರೆ. ಈ ವೇಳೆ ಫ್ಲೆಕ್ಸ್ ಕಟ್ಟದಂತೆ ಪೊಲೀಸರು ತಿಳಿವಳಿಕೆ ನೀಡಿದರೂ, ಸರ್ಕಲ್’ನಲ್ಲಿ ಫ್ಲೆಕ್ಸ್ ಕಟ್ಟಿದ್ದಾರೆ ಎಂದು ಆಪಾದಿಸಿ 8 ರಿಂದ 10 ‘ಅಪರಿಚಿತರ’ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ ವಿಸ್ತರಣೆ ಆಗುತ್ತಾ ನಿಷೇಧಾಜ್ಞೆ, ಎಡಿಜಿಪಿ ಹೇಳಿದ್ದೇನು?

ಫ್ಲೆಕ್ಸ್ ಕಿತ್ತವರ ವಿರುದ್ಧವು ಪ್ರಕರಣ

ಇನ್ನು, ಅಮೀರ್ ಅಹಮದ್ ಸರ್ಕಲ್’ನಲ್ಲಿ ಅಳವಡಿಸಿದ್ದ ಸಾವರ್ಕರ್ ಫ್ಲೆಕ್ಸನ್ನು ಕಿತ್ತೆಸೆದ ಆರೋಪ ಸಂಬಂಧ 3 ರಿಂದ 4 ‘ಅಪರಿಚಿತರ’ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಸಾರ್ವಕರ್ ಫ್ಲೆಕ್ಸ್ ಕಿತ್ತೊಗೆಯಲು ಮುನ್ನುಗ್ಗಿದ ಯುವಕರು, ಹಿಂದೂಗಳ ಭಾವನೆಗೆ ಧಕ್ಕೆ ತರುವ ಹಾಗೆ ಅವಾಚ್ಯವಾಗಿ ನಿಂದಿಸಿ, ಸರ್ಕಲ್’ಗೆ ಬಂದಿದ್ದಾರೆ. ಫ್ಲೆಕ್ಸನ್ನು ಕಿತ್ತೊಗೆದಿದ್ದಾರೆ. ಇದರಿಂದ ಮತೀಯ ಭಾವನೆ ಕೆರಳಿಸಿದ್ದಾರೆ. ಸೌಹಾರ್ದತೆಗೆ ಭಂಗ ಉಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ – ಫ್ಲೆಕ್ಸ್ ವಿವಾದ, ಶಿವಮೊಗ್ಗದಲ್ಲಿ ಕೋಟಿ ಕೋಟಿ ನಷ್ಟ, ‘ಬ್ರ್ಯಾಂಡ್ ಶಿವಮೊಗ್ಗ’ಕ್ಕೆ ಕಪ್ಪು ಚುಕ್ಕೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 18, 2022

Leave a Comment