ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 1 ಏಪ್ರಿಲ್ 2022
ಆಸ್ತಿಗಾಗಿ ಕಿರುಕುಳ ನೀಡುತ್ತಿರುವ ಆರೋಪದ ಹಿನ್ನೆಲೆ ಮಗ ಮತ್ತು ಸೊಸೆ ವಿರುದ್ಧ ವೃದ್ಧೆಯೊಬ್ಬರು ದೂರು ನೀಡಿದ್ದಾರೆ.
ನಗರದ ಹೊಸಮನೆ ಶಾರದಾ ಕಾಂಪೌಂಡ್‌ನಲ್ಲಿರುವ ಆಸ್ತಿಗಾಗಿ ಮಗ-ಸೊಸೆ ಕಿರುಕುಳ ನೀಡುತ್ತಿದ್ದಾರೆ ಎಂದು ವೃದ್ಧೆ ಪೊಲೀಸರಿಗೆ ದೂರು ನೀಡಿದ್ದಾರೆ. ಹೊಸಮನೆಯ 62 ವರ್ಷದ ವೃದ್ಧೆ ತನ್ನ ಮಗ ಮತ್ತು ಸೊಸೆ ವಿರುದ್ಧ ಮಾನಸಿಕ ಮತ್ತು ದೈಹಿಕ ಹಿಂಸೆಯ ಆರೋಪ ಮಾಡಿದ್ದಾರೆ.
ಪತಿ ಶಾರದಾ ಕಾಂಪೌಂಡ್‌ನಲ್ಲಿ ಮನೆ ಕಟ್ಟಿದ್ದರು. ಇಬ್ಬರು ಗಂಡು ಮಕ್ಕಳಿದ್ದು ಈಗಾಗಲೇ ಕಿರಿಯ ಮಗ, ನನ್ನ ಹಿರಿಯ ಮಗನನ್ನು ಮನೆಯಿಂದ ಹೊರಗೆ ಹಾಕಿದ್ದು, ಇದೀಗ ಪತ್ನಿ ಜತೆ ಸೇರಿಕೊಂಡು ನನಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200


