ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE | 29 JUNE 2023
SHIMOGA : ಸ್ಮಾರ್ಟ್ ಸಿಟಿ (Smart City) ಯೋಜನೆಯ ವಿದ್ಯುತ್ ಬಾಕ್ಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಮಳೆ ಸುರಿಯುತ್ತಿದ್ದ ಹೊತ್ತಲ್ಲಿ ಕರೆಂಟ್ ಬಾಕ್ಸ್ನಲ್ಲಿ ಬೆಂಕಿ ಹೊತ್ತಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಮನೆಯಿಂದ ಹೊರ ಬರಲು ಹೆದರಿದರು.

ಗಾಂಧಿ ನಗರದ 1ನೇ ಪ್ಯಾರಲಲ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಸ್ಮಾರ್ಟ್ ಸಿಟಿಯ (Smart City) ಕರೆಂಟ್ ಬಾಕ್ಸ್ನಲ್ಲಿ ದಟ್ಟ ಹೊಗೆಯೊಂದಿಗೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಕೂಡಲೆ ಮೆಸ್ಕಾಂಗೆ ಕರೆ ಮಾಡಿದ್ದಾರೆ.
ಆತಂಕ, ಆಕ್ರೋಶ
ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ಪ್ರತಿ ಮನೆಗೆ ಅಂಡರ್ ಗ್ರೌಂಡ್ ಕೇಬಲ್ ಮೂಲಕ ವಿದ್ಯುತ್ ಪೂರೈಕೆ ಮಾಡುವ ಯೋಜನೆ ಇದೆ. ಇದಕ್ಕಾಗಿ ನಿರ್ದಿಷ್ಟ ಮನೆಗೆ ಒಂದು ಫ್ಯೂಸ್ಗಳ ಬಾಕ್ಸ್ ಸ್ಥಾಪಿಸಲಾಗಿದೆ. ಗಾಂಧಿ ನಗರದಲ್ಲಿ ಇದೆ ಬಾಕ್ಸ್ನಲ್ಲಿ ಬೆಂಕಿ ಕಾಣಿಸಿದೆ.
ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ಬಾಕ್ಸ್ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಸದ್ಯ ಬೆಂಕಿ ನಂದಿದೆ. ಆದರೆ ಜನರು ಮಾತ್ರ ಬಾಕ್ಸ್ ಸಮೀಪ ಓಡಾಡಲು ಹೆದರುವಂತಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಚುರುಕು, ಕಳೆದ 24 ಗಂಟೆಯಲ್ಲಿ ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?






