‘ಇನ್ಸ್‌ಪೆಕ್ಟರ್‌ ವರ್ಗಾವಣೆಯಲ್ಲಿ ಸಿಎಂ ಪುತ್ರನಿಗೆ 50 ಲಕ್ಷ, ಆರು ತಿಂಗಳಲ್ಲಿ ರಾಜ್ಯ ರಾಜಕಿಯದಲ್ಲಿ ಅಲ್ಲೋಲ ಕಲ್ಲೋಲ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜೂನ್ 2020

ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರನ ವಿರುದ್ಧ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು 50 ಲಕ್ಷ ರುಪಾಯಿಯ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಇನ್ನು ಆರು ತಿಂಗಳಲ್ಲಿ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

104261796 1148007192227366 3356719056818964510 n.jpg? nc cat=103& nc sid=110474& nc ohc=WsvxY70dh MAX8ZlgOV& nc ht=scontent.fblr11 1

50 ಲಕ್ಷ ರೂ ಪಡೆದಿರುವ ಆರೋಪ

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಇನ್ಸ್‍ಪೆಕ್ಟರ್ ಒಬ್ಬರ ವರ್ಗಾವಣೆ ವಿಚಾರದಲ್ಲಿ 50 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರ ಇರುವಷ್ಟು ಅವಧಿಯಲ್ಲಿ ಹಣ ಮಾಡಬೇಕು ಎಂದು ಯೋಚಿಸಿದಂತಿದೆ ಎಂದು ಟೀಕಿಸಿದರು.  

104482535 892687271211184 4465237221016306746 o.jpg? nc cat=101& nc sid=110474& nc ohc=YSw3P6UA8IoAX9t2IOt& nc ht=scontent.fblr11 1

ಹಳ್ಳಿ ಹಕ್ಕಿಗೆ ಆಗಬೇಕಾದದ್ದೇ

ಹೆಚ್.ವಿಶ್ವನಾಥ್ ಅವರಿಗೆ ಜೆಡಿಎಸ್ ಪಕ್ಷದ ವರಿಷ್ಠ ಹಚ್‍.ಡಿ.ದೇವೇಗೌಡ ಅವರು ಉನ್ನತ ಸ್ಥಾನ ನೀಡಿದ್ದರು. ಕಾಂಗ್ರೆಸ್ ಪಕ್ಷದಲ್ಲೂ ಅಧಿಕಾರ ಅನುಭವಿಸಿದ್ದರು. ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರಿಗೆ ಟಿಕೆಟ್ ತಪ್ಪಿದೆ. ಹಳ್ಳಿ ಹಕ್ಕಿಗೆ ಇದು ಆಗಬೇಕಾದದ್ದೇ ಎಂದು ವ್ಯಂಗ್ಯ ಮಾಡಿದರು.

ಮಾನಸ ಪುತ್ರನಿಂದಲೇ ಬೀಳುತ್ತೆ ಸರ್ಕಾರ

ಯಡಿಯೂರಪ್ಪ ಅವರು ಮುಳ್ಳಿನ ಕುರ್ಚಿ ಮೇಲೆ ಕೂತಿದ್ದಾರೆ. ಹೆಚ್ಚು ಕಾಲ ಅದರ ಮೇಲೆ ಕೂರಲು ಅವರಿಗೆ ಸಾದ್ಯವಿಲ್ಲ. ಮಾನಸ ಪುತ್ರ ಅಂತಾ ಹೇಳಿಕೊಂಡು ಓಡಾಡುತ್ತಿರುವವರೊಬ್ಬರಿಂದಲೇ ಅವರು ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.

104171942 892019767944601 6440612529489965117 o.jpg? nc cat=110& nc sid=110474& nc ohc=X5toOr79KEMAX9tBliO& nc ht=scontent.fblr1 4

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment