ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 12 JUNE 2023
SHIMOGA : ಶಕ್ತಿ ಯೋಜನೆ ಅಡಿ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Ride) ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆ ಇವತ್ತು ಸರ್ಕಾರಿ ಬಸ್ಸುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ವಿವಿಧ ಊರುಗಳಿಗೆ ತೆರಳಲು ಮಹಿಳೆಯರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣದ (Free Ride) ಲಾಭ ಪಡೆದರು.
ಹೇಗಿತ್ತು ಪರಿಸ್ಥಿತಿ?
ರಾಜ್ಯ ಸರ್ಕಾರ ಜೂ.11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಿದೆ. ಇವತ್ತು ಮಹಿಳಾ ಉದ್ಯೋಗಿಗಳು, ವಿದ್ಯಾರ್ಥಿನಿಯರು, ವಿವಿಧ ಊರಿಗೆ ತೆರಳುವ ಮಹಿಳಾ ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ್ದರು.
ನಿಲ್ದಾಣದ ಪ್ಲಾಟ್ಫಾರಂಗೆ ಬಸ್ಸುಗಳು ಬಂದು ನಿಲ್ಲುತ್ತಿದ್ದಂತೆ ಮಹಿಳೆಯರು ಬಾಗಿಲ ಬಳಿ ಮುತ್ತಿಕೊಳ್ಳುತ್ತಿದ್ದರು. ಕಿಟಕಿಗಳಿಂದ ಬ್ಯಾಗ್, ಬಟ್ಟೆ ಸೇರಿದಂತೆ ವಿವಿಧ ವಸ್ತಗಳನ್ನು ಒಳಗೆ ಹಾಕಿ ಸೀಟ್ ಕಾಯ್ದಿರಿಸುತ್ತಿದ್ದರು. ಮಹಿಳೆಯರು ಗುಂಪುಗೂಡತ್ತಿದ್ದಂತೆ ಪುರುಷ ಪ್ರಯಾಣಿಕರು ಬಸ್ ಹತ್ತಲು ಪರದಾಡುವ ದೃಶ್ಯ ಸಾಮಾನ್ಯವಾಗಿತ್ತು.
ಕಂಡಕ್ಟರ್ಗಳ ಜೊತೆ ಕಿರಿಕ್
ಉಚಿತ ಪ್ರಯಾಣಕ್ಕೆ ಸರ್ಕಾರ ಅನುಮತಿ ನೀಡಿದೆ. ಆಧಾರ್ ಕಾರ್ಡ್ ತೋರಿಸುವ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಕೆಲವು ಮಹಿಳೆಯರು ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿ, ಮೊಬೈಲ್ನಲ್ಲಿರುವ ಆಧಾರ್ ಫೋಟೊ ಪ್ರದರ್ಶಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ – ಭದ್ರಾವತಿ ಟ್ರ್ಯಾಕ್ಸ್ ಉದ್ಯಮಕ್ಕೆ ‘ಗ್ಯಾರಂಟಿʼ ಸಂಕಷ್ಟ, ಏನದು? ಎಷ್ಟಿವೆ ಟ್ರ್ಯಾಕ್ಸ್? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಕೆಲ ಕಂಡಕ್ಟರ್ಗಳು ಅಸಲಿ ಆಧಾರ್ ಕಾರ್ಡ್ ಬೇಕು ಎಂದು ಸೂಚಿಸಿದ್ದರಿಂದ ಮಹಿಳೆಯರೊಂದಿಗೆ ಜಗಳವಾಗಿದೆ. ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ಕೆಲವು ಮಹಿಳೆಯರು, ಯುವತಿಯರು ಕಂಡಕ್ಟರ್ಗಳ ಫೋಟೊಗಳನ್ನು ಕ್ಲಿಕ್ಕಿಸಿಕೊಂಡ ಹೋದ ಘಟನೆಗಳು ಕೂಡ ನಡೆದವು.
ಎಲ್ಲಿಗೆಲ್ಲ ಹೆಚ್ಚು ಪ್ರಯಾಣ?
ಶಿವಮೊಗ್ಗ ಬಸ್ ನಿಲ್ದಾಣದಿಂದ ವಿವಿಧೆಡೆ ಮಹಿಳೆಯರು ಉಚಿತ ಪ್ರಯಾಣ ಮಾಡಿದರು. ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಕಂಡಕ್ಟರ್ಗಳು ತಿಳಿಸುತ್ತಿದ್ದಾರೆ. ಧರ್ಮಸ್ಥಳ, ಶೃಂಗೇರಿ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ತಮ್ಮ ಕುಟುಂಬದ ಇತರೆ ಮಹಿಳಾ ಸದಸ್ಯರು, ಸ್ನೇಹಿತೆಯರ ಜೊತೆಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜನ ಶತಾಬ್ದಿ, ಭಾನುವಾರ ರಾತ್ರಿ ಪ್ರಯಾಣಿಕರು ಕಕ್ಕಾಬಿಕ್ಕಿ, ಸೋಮವಾರ ಬೆಳಗ್ಗೆನು ಗೊಂದಲ, ಏನಾಯ್ತು?
ಡೈರೆಕ್ಟ್ ಮಾರ್ಗದ ಬಸ್ಸುಗಳಿಗೆ ಹೆಚ್ಚಿನ ಡಿಮಾಂಡ್ ಇದೆ. ಶಿವಮೊಗ್ಗದಿಂದ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಹರಿಹರ, ಚಿಕ್ಕಮಗಳೂರು, ಶಿಕಾರಿಪುರ, ಶಿರಾಳಕೊಪ್ಪ, ಸಾಗರ, ತೀರ್ಥಹಳ್ಳಿ, ಭದ್ರಾವತಿ ಬಸ್ಸುಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡಿದರು. ಖಾಸಗಿ ಬಸ್ಸುಗಳಿದ್ದರು ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆಯಲು ಕೆಎಸ್ಆರ್ಟಿಸಿ ಬಸ್ಸುಗಳನ್ನು ಹತ್ತುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422