ಗಾಂಧಿ ಬಜಾರ್‌ನಲ್ಲಿ ಮತ್ತೆ ಶುರು ವ್ಯಾಪಾರ, ಅಗತ್ಯ ವಸ್ತುಗಳಿಗಷ್ಟೆ ಅವಕಾಶ, ಶಿವಮೊಗ್ಗ ನಗರದಾದ್ಯಂತ ಇವತ್ತು ಹೇಗಿದೆ ಪರಿಸ್ಥಿತಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 27 ಏಪ್ರಿಲ್ 2020

ಒಂದು ತಿಂಗಳ ಬಳಿಕ ಗಾಂಧಿ ಬಜಾರ್‌ನಲ್ಲಿ ಮತ್ತೊಮ್ಮೆ ವಹಿವಾಟು ಆರಂಭವಾಗಿದೆ. ದಿನಸಿ ಮತ್ತು ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.

ಲಾಕ್‍ಡೌನ್ ಆರಂಭವಾದಾಗ ಗಾಂಧಿ ಬಜಾರ್‌ನಲ್ಲಿ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆ ಗಾಂಧಿ ಬಜಾರ್‌ನಲ್ಲೂ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

94504926 1107541139607305 710022110516346880 n.jpg? nc cat=103& nc sid=110474& nc ohc=peofM 90QzUAX94yhdZ& nc ht=scontent.fblr11 1

ಸಾಮಾಜಿಕ ಅಂತರದಲ್ಲಿ ವ್ಯಾಪಾರ

ಗಾಂಧಿ ಬಜಾರ್‌ನಲ್ಲಿ ದಿನಸಿ ಅಂಗಡಿಗಳನ್ನು ತೆರೆಯಲಾಗಿದೆ. ಸಾಮಾಜಿಕ ಅಂತರದ ಬಾಕ್ಸ್ ಹಾಕಲಾಗಿದೆ. ಆ ಬಾ‌ಕ್ಸ್‌ಗಳಲ್ಲಿಯೇ ನಿಂತು ಜನರು ಅಗತ್ಯ ವಸ್ತುಗಳ ಖರೀದಿ ಮಾಡುತ್ತಿದ್ದಾರೆ.

94663293 1107541206273965 5938334547815956480 n.jpg? nc cat=103& nc sid=110474& nc ohc=oZcqMwL6foIAX9nqO a& nc ht=scontent.fblr11 1

ತರಕಾರಿ, ಹೂವು, ಹಣ್ಣು ವ್ಯಾಪಾರ ಜೋರು

ಇನ್ನು, ನಗರದ  ವಿವಿಧೆಡೆ ತರಕಾರಿ, ಹೂವು, ಹಣ್ಣು ವ್ಯಾಪಾರ ನಡೆಯುತ್ತಿದೆ. ಎಂಕೆಕೆ ರೆಸ್ತೆಯ ಸಿದ್ದಯ್ಯ ಸರ್ಕಲ್‍ನಲ್ಲಿ ತರಕಾರಿ, ಹೂವು, ಹಣ್ಣು ವ್ಯಾಪಾರ ನಡೆಯುತ್ತಿದೆ. ಆದರೆ ಜಿಲ್ಲಾಡಳಿತ ಸೂಚಿಸಿದಂತೆ ಸಾಮಾಜಿಕ ಅಂತರವಿಲ್ಲ, ಮಾಸ್ಕ್‍ಗಳು ಕೂಡ ಕಾಣಿಸುವುದಿಲ್ಲ.

95218310 1107541106273975 1868816085252308992 n.jpg? nc cat=106& nc sid=110474& nc ohc=rrNqDifWbikAX8j3j1X& nc ht=scontent.fblr11 1

ನೆಹರೂ ರೋಡ್, ದುರ್ಗಿಗುಡಿ ಕ್ಲೋಸ್‍

ಶಿವಮೊಗ್ಗ ನಗರದ ವಿವಿಧೆಡೆ ನಿರ್ಬಂಧ ಮುಂದುವರೆದಿದೆ. ನೆಹರೂ ರಸ್ತೆ, ಬಿ.ಹೆಚ್.ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳು ಬಂದ್ ಆಗಿವೆ. ಅಗತ್ಯ ವಸ್ತುಗಳ ವ್ಯಾಪಾರ ಮಾಡುವ ಅಂಗಡಿ ಬಾಗಿಲುಗಳು ಮಾತ್ರ ತೆಗೆಯಲಾಗಿದೆ. ತಳ್ಳುಗಾಡಿಯಲ್ಲಿ ಹೂವು, ಹಣ್ಣು, ತರಕಾರಿ ವ್ಯಾಪಾರ ಮುಂದುವರೆದಿದೆ.

94615505 1107541019607317 4083015758068580352 n.jpg? nc cat=100& nc sid=110474& nc ohc=3P4MrWsQAGMAX a18rK& nc ht=scontent.fblr11 1

ಮುಂದುವರೆದ ಸೆಕ್ಟರ್ ಲಾಕ್‍ಡೌನ್

ಅನಗತ್ಯವಾಗಿ ಸುತ್ತಾಡುವವರನ್ನು ನಿರ್ಬಂಧಿಸುವ ಸಲುವಾಗಿ ಶಿವಮೊಗ್ಗ ನಗರದಲ್ಲಿ ಸೆಕ್ಟರ್‍ ವೈಸ್‍ ಲಾಕ್‍ಡೌನ್ ಮುಂದುವರೆದಿದೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‍ ಹಾಕಲಾಗಿದೆ. ಆದರೂ ಬೈಕು, ಕಾರಿನಲ್ಲಿ ಸುತ್ತಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

94627045 1107541076273978 5085083442710839296 n.jpg? nc cat=101& nc sid=110474& nc ohc=JwXKaGfwSQUAX 6j4ea& nc ht=scontent.fblr11 1
93578388 852483425231569 3444932249521225728 o.jpg? nc cat=105& nc sid=8024bb& nc ohc=SZVPAp1sPCMAX obk8t& nc ht=scontent.fblr1 4
92107209 840687883077790 4340426127509028864 n.jpg? nc cat=103& nc sid=dd9801& nc ohc=nTffco3BFv0AX9cUOmv& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment