ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 AUGUST 2023
SHIMOGA : ಮನೆ ಬುನಾದಿ ಅಗೆಯುವಾಗ ಚಿನ್ನದ ನಾಣ್ಯಗಳ (Gold Coins) ನಿಧಿ ಪತ್ತೆಯಾಗಿದೆ. ಅದನ್ನು ಮಾರಾಟ ಮಾಡುತ್ತಿರುವುದಾಗಿ ನಂಬಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಐದು ಲಕ್ಷ ರೂ. ವಂಚನೆ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಬೆಂಗಳೂರಿನ ಮಂಜುನಾಥ ಸ್ವಾಮಿ ಎಂಬುವವರಿಗೆ ಶಿವಪ್ಪ ಗೊಲ್ಲರ್ ಎಂಬಾತ ವಂಚನೆ ಮಾಡಿದ್ದಾನೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಅಜ್ಜನಿಗೆ ಸಿಕ್ತು ರಾಶಿ ರಾಶಿ ಚಿನ್ನದ ನಾಣ್ಯ
ಹುಬ್ಬಳ್ಳಿಯ ಬಸಾಪುರ ಗ್ರಾಮದಲ್ಲಿ ಮನೆಯ ಬುನಾದಿ ಅಗೆಯುವಾಗ ಅಜ್ಜನಿಗೆ ಚಿನ್ನದ ನಾಣ್ಯಗಳ (Gold Coins) ನಿಧಿ ಸಿಕ್ಕಿದೆ ಎಂದು ಶಿವಪ್ಪ ಗೊಲ್ಲರ್ ಎಂಬಾತ ಮಂಜುನಾಥ ಸ್ವಾಮಿಗೆ ನಂಬಿಸಿದ್ದಾನೆ. ಚಿನ್ನದ ನಾಣ್ಯಗಳನ್ನ ಮಾರಾಟ ಮಾಡುತ್ತಿರುವುದಾಗಿ ತಿಳಿಸಿ ಶಿವಮೊಗ್ಗಕ್ಕೆ ಬರುವಂತೆ ಸೂಚಿಸಿದ್ದಾನೆ. ಮಂಜುನಾಥ ಸ್ವಾಮಿ ಅವರು ಮೊದಲ ಬಾರಿ ಶಿವಮೊಗ್ಗಕ್ಕೆ ಬಂದಾಗ ಶಿವಪ್ಪ ಗೊಲ್ಲರ್ ಒಂದು ಚಿನ್ನದ ನಾಣ್ಯವನ್ನು ಕೊಟ್ಟಿದ್ದ. ಅದನ್ನು ಪರೀಕ್ಷಿಸಿದಾಗ ಅಸಲಿ ಚಿನ್ನವಾಗಿತ್ತು.
ಐದು ಲಕ್ಷ ರೂ. ಪಡೆದು ಮೊಬೈಲ್ ಸ್ವಿಚ್ ಆಫ್
ಇನ್ನಷ್ಟು ಚಿನ್ನದ ನಾಣ್ಯಗಳು ಬೇಕು ಎಂದು ಕೇಳಿದಾಗ, ಹಣ ಕೊಟ್ಟಷ್ಟು ನಾಣ್ಯಗಳನ್ನು ಕೊಡುವುದಾಗಿ ಶಿವಪ್ಪ ತಿಳಿಸಿದ್ದ. ಐದು ಲಕ್ಷ ರೂ. ಹಣದೊಂದಿಗೆ ಎರಡನೇ ಬಾರಿ ಶಿವಮೊಗ್ಗಕ್ಕೆ ಬಂದಿದ್ದ ಮಂಜುನಾಥ ಸ್ವಾಮಿ ಅವರನ್ನು ಸವಳಂಗ ರಸ್ತೆಯ ಸರ್ಜಿ ಕನ್ವೆಷನ್ ಹಾಲ್ ಸಮೀಪ ಕರೆಯಿಸಿಕೊಂಡಿದ್ದ. ಹಣ ಪಡೆದು 474 ಗ್ರಾಂ ನಾಣ್ಯಗಳನ್ನು ನೀಡಿದ್ದ. ಪರಿಶೀಲಿಸಿದಾಗ ಆ ನಾಣ್ಯಗಳು ನಕಲಿ ಎಂದು ಗೊತ್ತಾಗಿದೆ. ಶಿವಪ್ಪ ಗೊಲ್ಲರ್‌ಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿತ್ತು.
ಇದನ್ನೂ ಓದಿ – ಅಡ್ಡ ನಿಲ್ಲಿಸಿದ್ದ ಬೈಕ್ ತಗಿ ಅಂದಿದ್ದಕ್ಕೆ ಕೀಯಿಂದಲೇ ಮೂವರಿಗೆ ಹೊಡೆದು ರಕ್ತ ಬರಿಸಿದ ಯುವಕ – 3 ಫಟಾಫಟ್ ನ್ಯೂಸ್
ವಂಚನೆಗೊಳಗಾಗಿರುವುದು ಅರಿವಾಗುತ್ತಿದ್ದಂತೆ ಮಂಜುನಾಥ ಸ್ವಾಮಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಹೋಗುತ್ತಿದ್ದ ಬಾಲಕನ ಮೇಲೆ ಏಕಾಏಕಿ ಅಟ್ಯಾಕ್, ಕಾರಣವೇನು?
ಇಂತಹ ಪ್ರಕರಣ ಇದೇ ಮೊದಲಲ್ಲ
ನಿಧಿ ನೆಪದಲ್ಲಿ ವಂಚನೆ ಮಾಡುತ್ತಿರುವುದು ಇದೆ ಮೊದಲಲ್ಲ. ರಾಜ್ಯ ವಿವಿಧೆಡೆ ಇಂತಹ ಪ್ರಕರಣ ದಾಖಲಾಗಿದೆ. ವಂಚಕರು ಕಾರ್ಯಕ್ರಮಗಳು, ಬಸ್ಸು, ಟ್ರೈನಿನಲ್ಲಿ ಸಂಚರಿಸುವಾಗ ಅಥವಾ ಸಾರ್ವಜನಿಕ ಸ್ಥಳದಲ್ಲಿ ಯಾರನ್ನಾದರು ಪರಿಚಯ ಮಾಡಿಕೊಂಡು, ಮೊಬೈಲ್ ನಂಬರ್ ಪಡೆಯುತ್ತಾರೆ. ಅವರೊಂದಿಗೆ ಭರವಸೆ ಬರುವಂತೆ ಸ್ವಲ್ಪ ಸಮಯ ಮಾತನಾಡುತ್ತಾರೆ. ಕೊನೆಗೆ ನಿಧಿ ಪತ್ತೆಯಾಗಿದೆ ಎಂದು ತಿಳಿಸಿ ಮೊದಲಿಗೆ ಅಸಲಿ ಚಿನ್ನದ ನಾಣ್ಯ ಕೊಟ್ಟು ಆಸೆ ಹುಟ್ಟಿಸುತ್ತಾರೆ. ಆ ನಂತರ ವಂಚಿಸಿ ಕಣ್ಮರೆಯಾಗುತ್ತಾರೆ. ಅಪರಿಚಿತರ ಜೊತೆಗೆ ವ್ಯವಹಾರ ನಡೆಸುವಾಗ ಸ್ವಲ್ಪ ಎಚ್ಚರ ವಹಿಸಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.