ಮಧ್ಯರಾತ್ರಿ ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಶಾಕ್‌, ಕಂತೆ ಕಂತೆ ಹಣದ ಬ್ಯಾಗ್‌ ಮಿಸ್ಸಿಂಗ್

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE| 24 JUNE 2023

SHIMOGA : ಚಿನ್ನಾಭರಣ ಖರೀದಿಗೆ ತೆರಳುತ್ತಿದ್ದಾಗ (Gold Smith) ಲಕ್ಷಾಂತರ ರೂ. ಹಣವಿದ್ದ ಬ್ಯಾಗ್‌ ಕಳ್ಳತನವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.

KSRTC-Bus-Stand-In-Shimoga

ಏನಿದು ಪ್ರಕರಣ? ಹೇಗಾಯ್ತು ಕಳ್ಳತನ?

ದಾವಣಗೆರೆಯ ಚಿನ್ನಾಭರಣ ವ್ಯಾಪಾರಿ (Gold Smith) ಗೌರೀಶ್‌ ವರ್ಣೇಕರ್‌ ಎಂಬುವವರು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದರು. ಅಲ್ಲಿ ಚಿನ್ನಾಭರಣ ಖರೀದಿಸಲು 30 ಲಕ್ಷ ರೂ. ಹಣವನ್ನು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದರು. ಮಧ್ಯರಾತ್ರಿ 1 ಗಂಟೆ ಹೊತ್ತಿಗೆ ಶಿವಮೊಗ್ಗ ನಿಲ್ದಾಣಕ್ಕೆ ಬಸ್‌ ತಲುಪಿದೆ. ಈ ವೇಳೆ ಗೌರೀಶ್‌ ವರ್ಣೇಕರ್‌ ಬ್ಯಾಗನ್ನು ತಮ್ಮ ಸೀಟಿನ ಮೇಲಿಟ್ಟು ಬಸ್ಸಿನಿಂದ ಕೆಳಗಿಳಿದಿದ್ದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೆಳಗ್ಗೆ ಬಸ್‌ ಇಳಿಯುವ ಹೊತ್ತಿಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಗೆ ಕಾದಿತ್ತು ಶಾಕ್

ಮಗನಿಗೆ ಫೋನ್‌ ಮಾಡಿ ಮಾತನಾಡಿದ ಬಳಿಕ ಬಸ್‌ ಹತ್ತಿ ಸೀಟ್‌ ಬಳಿ ಬಂದಾಗ ಗೌರೀಶ್‌ ವರ್ಣೇಕರ್‌ ಅವರ ಬ್ಯಾಗ್‌ ಇರಲಿಲ್ಲ. ಆ ಜಾಗದಲ್ಲಿ ಅದೇ ಬಣ್ಣದ ಮತ್ತೊಂದು ಬ್ಯಾಗ್‌ ಇತ್ತು. ಇದರಿಂದ ಆತಂಕಕ್ಕೀಡಾದ ಅವರು ಎಲ್ಲೆಡೆ ಹುಡುಕಾಡಿದರು. ಆದರೆ ಬ್ಯಾಗ್‌ ಸಿಕ್ಕಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದ ಮೊದಲ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡ ರೆಡಿ, ಹೇಗಿದೆ? ಎಷ್ಟು ಕಾರ್‌, ಬೈಕ್‌ ನಿಲ್ಲಿಸಬಹುದು?

30 ಲಕ್ಷ ರೂ. ಹಣ ಕಳ್ಳತನ ಆಗಿರುವ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment