ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಅಕ್ಟೋಬರ್ 2020
ಗ್ರಾಮಸೇವಾ ಸಂಘ ಹಾಗೂ ಕಟಿಲು ಅಶೋಕ್‌ಪೈ ಸ್ಮಾರಕ ಕಾಲೇಜು ಇವರ ಸಂಯುಕ್ತಾಶ್ರ ಯದಲ್ಲಿ ಅ.31 ರಿಂದ ನ.2ರವರೆಗೆ ನಗರದ ಮಲ್ಲಿಕಾರ್ಜುನ ಚಿತ್ರ ಮಂದಿರ ಹಿಂಭಾಗದಲ್ಲಿರುವ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ವಿನೋದಿನಿ ಕಟ್ಟಡದಲ್ಲಿ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ ಎಂದು ಚರಕ ಕೈಮಗ್ಗ ಸಹಕಾರ ಸಂಘದ ಮುಖ್ಯಸ್ಥೆ ಪ್ರತಿಭಾ ಹೇಳಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಭಾ, ಚರಕ ಕೈಮಗ್ಗ ಸಹಕಾರ ಸಂಘದ ಮಹಿಳೆಯರು ಇತ್ತೀಚೆಗೆ ಹೆಗ್ಗೋಡಿನಲ್ಲಿ ನಡೆಸಿದ ಚಾರಿತ್ರಿಕ ಹೋರಾಟದಿಂದ ಪ್ರೇರಿತವಾಗಿ ಗ್ರಾಮ ಸೇವಾ ಸಂಘವು ಗ್ರಾಮೋದ್ಯೋಗ ಉಳಿಸಿ ಎಂಬ ರಾಜ್ಯವ್ಯಾಪಿ ಆಂದೋಲನಕ್ಕೆ ಕರೆ ನೀಡಿದೆ. ಇದೊಂದು ರಚನಾತ್ಮಕ ಆಂದೋಲನವಾಗಿದ್ದು, ಈ ಹಿನ್ನೆಲೆ ಯಲ್ಲಿ ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕನ್ನಡ ರಾಜ್ಯೋತ್ಸವದ ಸಂದರ್ಭ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ವಸ್ತ್ರ ವಿನ್ಯಾಸ, ಸಿದ್ಧ ಉಡುಪು, ಕರಕುಶಲ ವಸ್ತುಗಳು ಹಾಗೂ ಕೃಷಿ ಉತ್ಪನ್ನಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹೆಸರಾಂತ ವಿನ್ಯಾಸಕಾರರು, ಆರ್ಥಿಕ ತಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತರು ಗ್ರಾಹಕ ಚಳವಳಿಯ ನೇತೃತ್ವ ವಹಿಸಿದ್ದಾರೆ. ಪ್ರದರ್ಶನ ಮಾರಾಟದೊಟ್ಟಿಗೆ ಸಂಸ್ಥೆ ಆವರಣದಲ್ಲಿ ಚರ್ಚಾಗೋಷ್ಠಿ, ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರದರ್ಶನದಲ್ಲಿ ಗ್ರಾಮೋದ್ಯೋಗಕ್ಕೆ ಸಂಬಂಧಪಟ್ಟಂತೆ ಕೈಉತ್ಪನ್ನಗಳು ಇರುತ್ತವೆ. ಕೈಉತ್ಪನ್ನಗಳನ್ನೆ ಕೊಳ್ಳಿ ಎಂದು ಜನತೆಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಅ.31 ರಂದು ಬೆಳಿಗ್ಗೆ 11 ಗಂಟೆಗೆ ಉದ್ಗಾಟನೆ ಕಾರ್ಯಕ್ರಮವಿರುತ್ತದೆ. ಡಾ.ರಜನಿ ಪೈ, ಅರುಣಾದೇವಿ ಮತ್ತು ಪ್ರಸನ್ನ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಂಗಕರ್ಮಿ ಪ್ರಸನ್ನ ಮತ್ತು ಡಿವಿಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಟಿ.ಕೃಷ್ಣಮೂರ್ತಿ ಅಂದು ವಾಲ್ಮೀಕಿ ಜಯಂತಿ ಅಂಗವಾಗಿ ರಾಮಾಯಣ ಓದು, ವಾಲ್ಮೀಕಿ ಮತ್ತು ರಾಮಾಯಣ ಪರಂಪರೆ ಕುರಿತು ಮಾತನಾಡಲಿದ್ದಾರೆ ಎಂದರು.
ನ.1ರ ಬೆಳಿಗ್ಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ 11.30ಕ್ಕೆ ಚಿಂತಕ ರಾಜೇಂದ್ರ ಚೆನ್ನಿ ಹಾಗು ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಮೇಠಿ ಶ್ರಮಜೀವಿಗಳ ಕನ್ನಡ ಕುರಿತು ಮಾತನಾಡುವರು. ಸಂಜೆ 5ಕ್ಕೆ ನಮ್ ಟೀಮ್ ತಂಡದಿಂದ ಕರೋನಾ ಜೊತೆ ಜೀವನ ಕುರಿತು ಕಿರು ನಾಟಕ ಹಮ್ಮಿಕೊಳ್ಳಲಾದೆ. ಇದನ್ನು ಗೂಗಲ್ ಮೀಟ್‌ನಲ್ಲೂ ಕೂಡ ನೋಡಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂದ್ಯಾಕಾವೇರಿ, ಸಿ.ಹೆಚ್.ಅಭಿಲಾಶ್ ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]