ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 JULY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಚೆನ್ನೈ – ಶಿವಮೊಗ್ಗ ನಡುವಿನ ನೂತನ ರೈಲಿಗೆ (Train) ಸಂಸದ ಬಿ.ವೈ.ರಾಘವೇಂದ್ರ ಇವತ್ತು ಚಾಲನೆ ನೀಡಿದರು. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ರೈಲಿಗೆ ಹಸಿರು ನಿಶಾನೆ ತೋರಿಸಿದರು.
ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದ್ದೇರು?
ಶಿವಮೊಗ್ಗ – ಬೀರೂರು ನಡುವೆ ರೈಲ್ವೆ ಹಳಿ ಡಬ್ಲಿಂಗ್ ಆದರೆ ಬೆಂಗಳೂರಿಗೆ ಮತ್ತಷ್ಟು ಬೇಗ ತಲುಪಬಹುದು. ಡಬ್ಲಿಂಗ್ಗಾಗಿ ಕೇಂದ್ರಕ್ಕೆ 1200 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಟೆಂಡರ್ ಕರೆದು ಕೆಲಸ ಆರಂಭವಾಗುವ ನಿರೀಕ್ಷೆ ಇದೆ. ಶಿವಮೊಗ್ಗವನ್ನು ಕೊಂಕಣ ರೈಲ್ವೆಗೆ ಸಂಪರ್ಕಿಸಲು ಅರಣ್ಯ ಸಮಸ್ಯೆ ಉಂಟಾಗಿದೆ. ಹಾಗಾಗಿ ಬೀರೂರು, ಹಾಸನ, ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ.ಬಿ.ವೈ.ರಾಘವೇಂದ್ರ, ಸಂಸದ
ಈ ಹಿಂದೆ ರೈಲುಗಳು ಬಂದರೆ ನಗರದ ವಿವಿಧೆಡೆ ರಸ್ತೆಯಲ್ಲಿ ವಾಹನಗಳಲ್ಲಿ ಬಹು ಹೊತ್ತು ಕಾಯಬೇಕಿತ್ತು. ಆದರೆ ಈಗ ಎಲ್ಲೆಡೆ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ರಾಘವೇಂದ್ರ ಅವರದ್ದು ಅಭಿವೃದ್ಧಿ ಪರ ಚಿಂತನೆ. ಜಿಲ್ಲೆಗೆ ಯಾವೆಲ್ಲ ಯೋಜನೆಗಳನ್ನು ತರಬೇಕು ಅನ್ನುವುದು ಅವರಿಗೆ ಗೊತ್ತಿದೆ. ಕಳೆದ ಹತ್ತು ವರ್ಷದಿಂದ ಈಚೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣದ ಚಿತ್ರಣವೆ ಬದಲಾಗಿದೆ.ಶಾರದಾ ಪೂರ್ಯಾನಾಯ್ಕ್, ಶಾಸಕಿ
ರೈಲ್ವೆ ಕ್ಷೇತ್ರದಲ್ಲಿ ಶಿವಮೊಗ್ಗ ಮತ್ತಷ್ಟು ಪ್ರಾಮುಖ್ಯತೆ ಪಡೆಯಲಿದೆ. ರೈಲುಗಳ ನಿರ್ವಹಣೆಗೆ ಪಿಟ್ಲೈನ್ ವ್ಯವಸ್ಥೆಯಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಇದು ಆರಂಭವಾಗಲಿದೆ. ಆಗ ಮತ್ತಷ್ಟು ರೈಲುಗಳು ಶಿವಮೊಗ್ಗಕ್ಕೆ ಬರಲಿವೆ. ಇದಕ್ಕೆಲ್ಲ ಮೂಲ ಕಾರಣ ಸಂಸದ ಬಿ.ವೈ.ರಾಘವೇಂದ್ರ.ಫಣೀಂದ್ರ ಶಾಸ್ತ್ರಿ, ರೈಲ್ವೆ ಇಲಾಖೆ ಪಿಸಿಸಿಎಂ
ಜಿಲ್ಲೆಯ ಒಟ್ಟು ಅಭಿವೃದ್ಧಿಯ ಪರವಾಗಿ ಚಿಂತಿಸುವ ಸಂಸದರೊಬ್ಬರು ನಮಗೆ ಸಿಕ್ಕಿದ್ದಾರೆ. 2014ರ ಬಳಿಕ ದೇಶದ ಚಿತ್ರಣ ಬದಲಾಗಿದೆ. ಜಿಲ್ಲೆಯಲ್ಲಿಯು ಅಂತಹುದ್ದೆ ಅಭಿವೃದ್ಧಿ ಪರ್ವ ಕಾಣುತ್ತಿದ್ದೇವೆ.ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ
ರಾಘವೇಂದ್ರ ಅವರಿಗೆ ಶಿವಮೊಗ್ಗದ ಜೊತೆಗೆ ಪಕ್ಕದ ಜಿಲ್ಲೆಗಳ ಮೂಲಕ ವಿವಿಧೆಡೆಗೆ ರೈಲ್ವೆ ಸಂಪರ್ಕ ಒದಗಿಸುವ ಕನಸು ಇದೆ. ನಮ್ಮ ಸಂಸದರಿಗೆ ಮಂತ್ರಿಗಿರಿ ಸಿಗಬೇಕಿತ್ತು ಎಂದು ಶಾಸಕರು, ಜನರ ಅಭಿಪ್ರಾಯವಾಗಿದೆ.ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಲಯದ ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಕೆ.ವಿ.ವಸಂತ ಕುಮಾರ್, ಜಿಲ್ಲಾ ವಾಣಿಜ್ಯ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ರೈಲ್ವೆ ಅಧಿಕಾರಿ ವಿನಾಯಕ್ ಸೇರಿದಂತೆ ಹಲವರು ಹಾಜರಿದ್ದರು.
ಇದನ್ನೂ ಓದಿ – ಶಿವಮೊಗ್ಗ – ಚೆನ್ನೈ ರೈಲಿನ ವೇಳಾಪಟ್ಟಿ ಪ್ರಕಟ, ಎಲ್ಲೆಲ್ಲಿ ಸ್ಟಾಪ್ ಇರುತ್ತೆ? ಎಷ್ಟು ಬೋಗಿಗಳಿರುತ್ತವೆ?