ಶಿವಮೊಗ್ಗದಲ್ಲಿ ಅಮಾನವೀಯ ಕೃತ್ಯ, ಕಂಬಕ್ಕೆ ಬೆಕ್ಕಿನ ಮೃತದೇಹ ಕಟ್ಟಿದ ಕಿಡಿಗೇಡಿಗಳು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಶಿವಮೂರ್ತಿ ಸರ್ಕಲ್‌ನ ಮೆಟ್ರೋ ಆಸ್ಪತ್ರೆ ಎದುರಿನ ಡಿವೈಡರ್‌ನಲ್ಲಿ ಕಿಡಿಗೇಡಿಗಳ ಅಮಾನವೀಯ ಕೃತ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. Cat

ಇಲ್ಲಿನ ರಸ್ತೆ ವಿಭಾಜಕದಲ್ಲಿರುವ ವಿದ್ಯುತ್ ದೀಪದ ಕಂಬಕ್ಕೆ ಕಿಡಿಗೇಡಿಗಳು ಬೆಕ್ಕನ್ನು ದಾರದಿಂದ ನೇತುಹಾಕಿದ್ದಾರೆ. ಬೆಕ್ಕು ಸತ್ತು ಹೋಗಿದ್ದು ಕೊಳೆತು ಹೋಗಿತ್ತು. ಇದರಿಂದ ದುರ್ವಾಸನೆ ಹರಡುತ್ತಿತ್ತು. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ತ್ಯಾಗರಾಜ ಮಿತ್ಯಾಂತ ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಹಂಚಿಕೊಂಡಿದ್ದರು. ಇದರ ಬೆನ್ನಿಗೆ ಸತ್ತ ಬೆಕ್ಕನ್ನು ತೆರವು ಮಾಡಲಾಗಿದೆ.

CAT-Tide-to-pole-on-divider-at-Shivamurthy-Circle-in-Shimoga

ಸಿಸಿಟಿವಿ ಪರಿಶೀಲನೆಗೆ ಆಗ್ರಹ

ಈ ಸರ್ಕಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಲಾಗಿದೆ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದೃಶ್ಯಾವಳಿ ಪರಿಶೀಲಿಸಿ ಕೃತ್ಯ ಎಸಗಿದ ವ್ಯಕ್ತಿಯನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ – ಗೋಪಿ ಸರ್ಕಲ್‌ನಲ್ಲಿ ಡೊನಾಲ್ಡ್‌ ಟ್ರಂಪ್‌ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್‌, ಸೌದೆ ಒಲೆ ಅಡುಗೆ

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 12, 2026

Leave a Comment