SHIVAMOGGA LIVE NEWS | 7 ಮಾರ್ಚ್ 2022
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ತಾಯಿ ಇವತ್ತು ಕಣ್ಣೀರು ಹಾಕಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಅಲ್ಲದೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಘೋಷಣೆ ಕೂಗಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಇವತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಕೊನೆಯ ಹಂತದಲ್ಲಿ ಮೃತ ಹರ್ಷನ ಕುಟುಂಬದವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.
ಕಣ್ಣೀರು ಹಾಕಿದ ತಾಯಿ, ಸಹೋದರಿ
ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಹರ್ಷನ ತಾಯಿ ಪದ್ಮಾ, ಅಕ್ಕ ಅಶ್ವಿನಿ ಕಣ್ಣೀರು ಹಾಕಿದರು. ಹಿಂದೂ ಸಂಘಟನೆಗಳ ಕಾರ್ಯಕರ್ತರು, ಕುಟುಂಬದವರನ್ನು ಸಮಾಧಾನಪಡಿಸಿದರು. ಈ ವೇಳೆ ಅಲ್ಲಿಗೆ ಬಂದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಈ.ಕಾಂತೇಶ್, ‘ನಾವೆಲ್ಲ ನಿಮ್ಮೊಂದಿಗಿದ್ದೇವೆ. ನಾವೆಲ್ಲ ನಿಮ್ಮ ಮಕ್ಕಳೆ’ ಎಂದು ಸಮಾಧಾನಪಡಿಸಿದರು.
ಘೋಷಣೆ ಕೂಗಿಸಿದ ಹರ್ಷ ತಾಯಿ
ಇನ್ನು, ‘ಘೋಷಣೆ ಕೂಗಿಸಿ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬಬೇಕು’ ಎಂದು ಕೆ.ಈ.ಕಾಂತೇಶ್ ಅವರು ಹರ್ಷ ತಾಯಿಗೆ ಮನವಿ ಮಾಡಿದರು. ಅದರಂತೆ ಹರ್ಷ ಅವರ ತಾಯಿ ಪದ್ಮಾ ಅವರು ಘೋಷಣೆ ಕೂಗಿಸಿದರು.
ಇದನ್ನೂ ಓದಿ | ಹರ್ಷ ಹತ್ಯೆ ವಿರುದ್ಧ ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಗಳ ಆಕ್ರೋಶ
ಇದನ್ನೂ ಓದಿ | ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಜೇನು ದಾಳಿ
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200