ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIMOGA, 16 AUGUST 2024 : ಶಿವಮೊಗ್ಗ ನಗರದಲ್ಲಿ ಇವತ್ತು ಮಳೆ ಅಬ್ಬರಿಸುತ್ತಿದೆ (Heavy Rain). ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಜೋರಾಗಿದೆ.
ನಗರದಲ್ಲಿ ದಟ್ಟ ಮೋಡ ಕವಿದಿದ್ದು ಕೆಲ ಹೊತ್ತು ಎಡೆಬಿಡದೆ ಮಳೆಯಾಗುತ್ತಿದೆ. ಭಾರಿ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ವಿವಿಧೆಡೆ ಮನೆ, ಮಳಿಗೆಗಳಿಗು ನೀರು ನುಗ್ಗಿದೆ.
ಜೈಲ್ ರಸ್ತೆ ಜಲಾವೃತ
ಶಿವಮೊಗ್ಗ ಜೈಲ್ ರಸ್ತೆ ಜಲಾವೃತವಾಗಿದೆ. ಸುಬ್ಬಯ್ಯ ಆಸ್ಪತ್ರೆಯಿಂದ ಹೊಸಮನೆ ಚಾನೆಲ್ ವರೆಗು ರಸ್ತೆ ಮೇಲೆ ನೀರು ಹರಿಯುತ್ತಿದೆ. ಚರಂಡಿಗಳು ಭರ್ತಿಯಾಗಿ ನೀರು ಉಕ್ಕಿ ಬರುತ್ತಿದೆ. ವಾಹನ ಸವಾರರು ನಿಧಾನವಾಗಿ ಚಲಿಸುವಂತಾಗಿದೆ. ಇನ್ನು, ನಗರದ ವಿವಿಧೆಡೆ ತಗ್ಗು ಪ್ರದೇಶಗಳಿಗು ನೀರು ನುಗ್ಗಿದೆ ಎಂದು ಹೇಳಲಾಗುತ್ತಿದೆ.





ಇದನ್ನೂ ಓದಿ ⇒ ತುಂಗಾ, ಭದ್ರ, ಲಿಂಗನಮಕ್ಕಿ ಜಲಾಶಯಗಳಿಗೆ ಒಳ ಹರಿವು ತುಸು ಹೆಚ್ಚಳ, ಇವತ್ತು ಎಷ್ಟಿದೆ ನೀರಿನ ಮಟ್ಟ?






