ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ನವೆಂಬರ್ 2021
ಸಮುದಾಯ ಸಂಸ್ಥೆ ವತಿಯಿಂದ ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ಹಿಂದೂಸ್ಥಾನಿ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ ನಡೆಯಿತು. ಹುಮಾಯುನ್ ಸಹೋದರರ ಜುಗಲ್ಬಂದಿಗೆ ಸಂಗೀತ ಪ್ರಿಯರು ಮನಸೋತರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಖ್ಯಾತ ಹಿಂದೂಸ್ಥಾನಿ ಗಾಯಕ ಹುಮಾಯುನ್ ಹರ್ಲಾಪುರ್ ಅವರ ಪುತ್ರರಾದ ನೌಶಾದ್ ಹರ್ಲಾಪುರ್, ನಿಶಾದ್ ಹರ್ಲಾಪುರ್ ಅವರು ಹಿಂದೂಸ್ಥಾನ ಸಂಗೀತ ಜುಗಲ್ಬಂದಿ ಸಡೆಸಿದರು. ದೇವಸ್ಥಾನದ ಆವರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಗೀತ ಪ್ರಿಯರು ಸೇರಿದ್ದರು.
ಸಮುದಾಯ ಸಂಸ್ಥೆಯ ಅಧ್ಯಕ್ಷ ಕೆ.ಜಿ.ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇವತ್ತು ಸಮುದಾಯ ಸಂಸ್ಥೆ ವತಿಯಿಂದ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನೆರಳಿಲ್ಲದ ಮನುಷ್ಯರು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಹಿಂದೂಸ್ಥಾನ ಸಂಗೀತ ಜುಗಲ್ಬಂದಿಯ ವಿಡಿಯೋ ಇಲ್ಲಿದೆ.