ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 14 APRIL 2021
ಯುಗಾದಿ ಮರುದಿನ ಹೊಸತೊಡಕು ಆಚರಿಸುವುದು ವಾಡಿಕೆ. ಆದರೆ ಈ ಬಾರಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿರುವುದು, ಹೊಸತೊಡಕು ಆಚರಣೆಗೆ ತೊಡಕಾಗಿದೆ. ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಾ.ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧಿಸಲಾಗಿದೆ. ಒಂದು ವೇಳೆ ಇದನ್ನು ವಿರೋಧಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಈ ಕುರಿತು ಆದೇಶ ಹೊರಡಿಸಿವೆ.
ಹೊಸತೊಡಕಿಗೆ ತೊಡಕಾದ ಆದೇಶ
ಯುಗಾದಿ ಮರುದಿನ ಡಾ. ಅಂಬೇಡ್ಕರ್ ಜಯಂತಿ ಹಿನ್ನೆಲೆ ಸರ್ಕಾರಿ ರಜೆ ಇದೆ. ಕುಟುಂಬದವರು ಒಟ್ಟಿಗೆ ಸೇರಿ ಹೊಸತೊಡಕು ಆಚರಿಸಲು ಜನರು ತಯಾರಾಗಿದ್ದರು. ಆದರೆ ಈವರೆಗೂ ಡಾ.ಅಂಬೇಡ್ಕರ್ ಜಯಂತಿಯಂದು ಹೊರಡಿಸದ ಆದೇಶವೊಂದನ್ನು ಸ್ಥಳೀಯ ಸಂಸ್ಥೆಗಳು ಹೊರಡಿಸಿವೆ. ಹಾಗಾಗಿ ಹೊಸದೊಡಕು ಆಚರಣೆಗೆ ಸಮಸ್ಯೆ ಉಂಟಾಗಿದೆ.
ಪಾಲಿಕೆ ಆದೇಶದ ಹಿನ್ನೆಲೆ, ಶಿವಮೊಗ್ಗ ನಗರದಲ್ಲಿನ ಮಾಂಸದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಜನರು ಅಂಗಡಿಗಳ ಬಳಿಗೆ ಬಂದು, ಸರ್ಕಾರದ ಆದೇಶ ತಿಳಿದು ಹಿಡಿಶಾಪ ಹಾಕುತ್ತ ಮರಳುತ್ತಿದ್ದಾರೆ.
ಬ್ಲಾಕ್‍ನಲ್ಲಿ ದುಬಾರಿ ಬೆಲೆ
ಕೆಲವು ಕಡೆ ಬ್ಲಾಕ್‍ನಲ್ಲಿ ಮಾಂಸ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಡಿಮಾಂಡ್ ಹೆಚ್ಚಿರುವ ಕಾರಣ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಕುರಿತು ಆರೋಪಗಳಿವೆ. ಸ್ಥಳೀಯ ಸಂಸ್ಥೆಗಳ ವಿಚಿತ್ರ ಆದೇಶ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಭದ್ರಾವತಿಯಲ್ಲೂ ಮಾಂಸ ಮಾರಾಟ ಬಂದ್
ಭದ್ರಾವತಿಯಲ್ಲೂ ಮಾಂಸ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೆಳಗ್ಗೆ ಕೆಲವು ಕಡೆ ಮಾಂಸದ ಅಂಗಡಿಗಳು ಬಾಗಿಲು ತೆಗೆದಿದ್ದವು. ಮಾಹಿತಿ ತಿಳಿಯುತ್ತಿದ್ದಂತೆ ಅಂಗಡಿ ಬಳಿಗೆ ಬಂದ ನಗರಸಭೆ ಅಧಿಕಾರಿಗಳು, ಅವುಗಳನ್ನು ಬಂದ್ ಮಾಡಿಸಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422