ಯಾರೂ ಇಲ್ಲದಿದ್ದಾಗ ಸಿಮೆಂಟ್ ಶೀಟ್ ಒಡೆದು ಮನೆ ಒಳಗೆ ನುಗ್ಗಿದ ಕಳ್ಳರು, ಏನೇನೆಲ್ಲ ಕಳವಾಗಿದೆ?

 ಶಿವಮೊಗ್ಗ  LIVE 

SHIVAMOGGA LIVE NEWS | 24 ಮಾರ್ಚ್ 2022

ಯಾರೂ ಇಲ್ಲದ ವೇಳೆ ಸಿಮೆಂಟ್ ಶೀಟ್ ತೆಗೆದು ಮನೆಯೊಳಗೆ ಚಿನ್ನ, ಬೆಳ್ಳಿ ಆಭರಣ, ನಗದು ಕಳ್ಳತನ ಮಾಡಲಾಗಿದೆ.

Sigandur-Janthre-2026-scaled.

Shimoga Nanjappa Hospital

ಶಿವಮೊಗ್ಗದ ಅಣ್ಣಾನಗರದ ದಾದಾಪೀರ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ದಾದಾಪೀರ್ ಅವರ ಕುಟುಂಬದವರು ಸಂಬಂಧಿಯ ಮನೆಗೆ ತೆರಳಿದ್ದಾಗ ಕಳ್ಳತನವಾಗಿದೆ.

ವಿಚಾರ ಗೊತ್ತಾಗಿದ್ದು ಹೇಗೆ?

ದಾದಾಪೀರ್ ಅವರ ಕುಟುಂಬದವರು ಸಂಬಂಧಿಯೊಬ್ಬರ ಮನೆಗೆ ತೆರಳಿದ್ದರು. ಪರೀಕ್ಷೆ ಇದ್ದ ಕಾರಣ ಮರುದಿನವೇ ದಾದಾಪೀರ್ ಅವರ ಮಗ ಮನೆಗೆ ಹಿಂತಿರುಗಿದ್ದಾನೆ. ಆಗ ಕಳ್ಳತನದ ವಿಚಾರ ಗೊತ್ತಾಗಿದೆ.

ಇದನ್ನೂ ಓದಿ | ಶಿವಮೊಗ್ಗ KSRTC ಬಸ್ ನಿಲ್ದಾಣಕ್ಕೆ ಲ್ಯಾಪ್ ಟಾಪ್ ಜೊತೆ ಬಂದ ವಿದ್ಯಾರ್ಥಿನಿಗೆ ಶಾಕ್

ಮನೆಯ ಬಾತ್ ರೂಂಗೆ ಹಾಕಿದ್ದ ಸಿಮೆಂಟ್ ಶೀಟ್ ಕಿತ್ತು ತೆಗೆದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಬೆಡ್ ರೂಂನಲ್ಲಿದ್ದ ಬೀರುವಿನ ಬಾಗಿಲು ಮೀಟಲಾಗಿದೆ. ಬೀರುವಿನಲ್ಲಿದ್ದ 1.54 ಲಕ್ಷ ರೂ. ಹಣ, 50 ಸಾವಿರ ರೂ. ಬೆಲೆ ಬಾಳುವ ಚಿನ್ನಾಭರಣ, 6 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು ಕಳ್ಳತನವಾಗಿದೆ.

ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KB Prasanna Kumar

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

JNNCE College VTU ranking

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment