ಗೋಪಾಳದಲ್ಲಿ ಮನೆ ಕಳ್ಳತನ, ಹೊಟೇಲ್ ಸಪ್ಲಯರ್ ಮೇಲೆ ಅನುಮಾನ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | THEFT | 30 ಏಪ್ರಿಲ್ 2022

ಗೋಪಾಳದ ಕೊನೇ ಬಸ್ ನಿಲ್ದಾಣ ಸಮೀಪದ ಮನೆಯೊಂದರಲ್ಲಿ ಬಂಗಾರದ ನೆಕ್ಲಸ್ ಮತ್ತು ನಗದು ಹಣ ಕಳವಾಗಿದೆ. ಹೋಟೆಲ್ ಸಪ್ಲೆಯರ್ ಮೇಲೆ ಅನುಮಾನ ವ್ಯಕ್ತವಾಗಿದ್ದು ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಗೋಪಾಳದ ಎಲ್.ಮಂಜುನಾಥ ಅವರು ಹೋಟೆಲ್ ನಡೆಸುತ್ತಿದ್ದಾರೆ. ಸೊರಬ ತಾಲೂಕಿನ ಬೆನ್ನೂರು ಗ್ರಾಮದ ಮೂರ್ತಿ ಎಂಬಾತ ಸಪ್ಲೆಯರ್ ಆಗಿದ್ದ. ಆತ ಮಂಜುನಾಥ ಅವರ ಮನೆಯಲ್ಲೇ ವಾಸವಿದ್ದ. ಏ.24ರಂದು ರಾತ್ರಿ ಮಂಜುನಾಥ ಅವರ ಪತ್ನಿ ಬೆಡ್‌ರೂಮ್ ನಲ್ಲಿದ್ದ ಬೀರುವಿನ ಲಾಕರ್‌ನಲ್ಲಿ ಬಂಗಾರದ ನೆಕ್ಲಸ್ ಮತ್ತು 19,500 ರೂ. ನಗದು ಇಟ್ಟಿದ್ದರು.

ಮರುದಿನ ಬೆಳಗ್ಗೆ ನೋಡಿದಾಗ ಕಳವು ಆಗಿರುವುದು ಬೆಳಕಿಗೆಬಂದಿದೆ. ಅದೇ ದಿನ ಮೂರ್ತಿ ಮನೆಯವರಿಗೆ ಹುಷಾರಿಲ್ಲ ಎಂದು ಹೇಳಿ ಬೆಳಗ್ಗೆಯೇ ಊರಿಗೆ ತೆರಳಿದ್ದು ವಾಪಸ್ ಬಂದಿಲ್ಲ. ಹಾಗಾಗಿ ಆತನೇ ಕಳವು ಮಾಡಿದ್ದಾನೆಂದು ಮಂಜುನಾಥ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ – ಕರೆಂಟ್ ಶಾಕ್, ನಾಲ್ಕು ವರ್ಷದ ಬಾಲಕಿ ಸಾವು, ಹೇಗಾಯ್ತು ಘಟನೆ?

Shimoga Nanjappa Hospital

Leave a Comment