ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 21 OCTOBER 2024 : ಕಳೆದ ರಾತ್ರಿ ಸುರಿದ ಭಾರಿ ಮಳೆಗೆ (Rain) ಎಲ್ಬಿಎಸ್ ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಆಸ್ತಿಪಾಸ್ತಿ ತೀವ್ರ ಹಾನಿ ಉಂಟಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಳೆದ ರಾತ್ರಿ ಸುರಿದ ಮಳೆಗೆ ಎಲ್ಬಿಎಸ್ ನಗರದಲ್ಲಿ ಹಾದು ಹೋಗಿರುವ ಚಾನಲ್ನಿಂದ ನೀರು ಭರ್ತಿಯಾಗಿ ಹೊರಗೆ ಹರಿದಿದೆ. ಇದರಿಂದ ಈ ಭಾಗದಲ್ಲಿರುವ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಇವತ್ತೇ ಭಾರಿ ಹಾನಿಯಾಗಿದೆ
ಭಾನುವಾರದ ಮಳೆಗಿಂತಲು ಕಳೆದ ರಾತ್ರಿ ಸುರಿದ ಮಳೆಗೆ ಈ ಭಾಗದಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿದೆ. ರಾತ್ರಿ ಏಕಾಏಕಿ ಮನೆಗಳಿಗೆ ನುಗ್ಗಿದ ನೀರು ಕೆಲವೇ ಕ್ಷಣದಲ್ಲಿ ಸುಮಾರು ಎರಡು ಅಡಿಯಷ್ಟು ಏರಿಕೆಯಾಗಿತ್ತು. ಮನೆಯಲ್ಲಿದ್ದ ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು, ದಿನಸಿ, ವಾಹನಗಳು ಹಾನಿಗೀಡಾಗಿವೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಬಹಳ ಹಾನಿಯಾಗಿದೆ. 35ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಕ್ಷಣೆಗಾಗಿ ಜನರು ಮೇಲಿನ ಮಹಡಿಗಳಲ್ಲಿ ಹೋಗಿ ಉಳಿದುಕೊಂಡಿದ್ದಾರೆ. ಚಾನಲ್ನ ತಡೆಗೋಡೆ ಕಾಮಗಾರಿ ಕಳಪೆ ಮತ್ತು ಅವೈಜ್ಞಾನಿಕವಾಗಿದೆ. ಇದೆ ಕಾರಣಕ್ಕೆ ನೀರು ಉಕ್ಕಿ ಬಡಾವಣೆಗೆ ನುಗ್ಗುತ್ತಿದೆ.
ಚೇತನ್ ಗೌಡ, ಕಾಂಗ್ರೆಸ್ ಮುಖಂಡ
ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಚೇತನ್ ಗೌಡ ಮತ್ತು ಎನ್.ರಮೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರಿಗೆ ಧೈರ್ಯ ಹೇಳಿದರು. ಇದೇ ಬಡಾವಣೆಯಲ್ಲಿ ಭಾನುವಾರವು ಮನೆಗಳು ಜಲಾವೃತವಾಗಿದ್ದವು. ತಹಶೀಲ್ದಾರ್ ಗಿರೀಶ, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಭೇಟಿ ನೀಡಿ ಪರಿಶೀಲಿಸಿದ್ದರು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಇವತ್ತೂ ಅಲರ್ಟ್, ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಎಲ್ಲೆಲ್ಲಿ ಮಳೆಯಾಗುತ್ತೆ?