ಶಿವಮೊಗ್ಗದ ಡೇಂಜರ್‌ ಹಂಪ್‌ಗಳಿಗೆ 24 ಗಂಟೆಯ ಗಡುವು,‌ ಬೈಕ್‌ನಲ್ಲಿ ಕಮಿಷನರ್‌ ಸಿಟಿ ರೌಂಡ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಗರದ ವಿವಿಧ ವಾರ್ಡ್‌ಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಮತ್ತು ಸಾರ್ವಜನಿಕರ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿರುವ ಡೇಂಜರಸ್‌ ಹಂಪ್‌ಗಳನ್ನು (road humps) ಮುಂದಿನ 24 ಗಂಟೆಯೊಳಗೆ ತೆರವುಗೊಳಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಅವರು ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಅವರು, ಹಂಪ್‌ಗಳ ತೆರವು ಕಾರ್ಯಾಚರಣೆ ಮತ್ತು ವೈಜ್ಞಾನಿಕ ಹಂಪ್‌ಗಳ ಅಳವಡಿಕೆ ಕುರಿತು ಮಹತ್ವದ ಮಾಹಿತಿ ನೀಡಿದರು.

Palike-Commissioner-Mayanna-gowda-speaks-about-Danger-Road Humps-in-Shivamogga

ಕಮಿಷನರ್‌ ಏನೆಲ್ಲ ಹೇಳಿದರು?

1 ಅವೈಜ್ಞಾನಿಕ ಹಂಪ್‌ಗಳ ಗುರುತು: ಕಳೆದ ಮೂರು ತಿಂಗಳಲ್ಲಿ ಸುಮಾರು ಶಿವಮೊಗ್ಗ ನಗರದ ವಿವಿಧೆಡೆ 70ಕ್ಕೂ ಹೆಚ್ಚು ಕಡೆ ಹಂಪ್‌ಗಳನ್ನು ಹಾಕಲಾಗಿತ್ತು. ಆದರೆ, ಸರಿಯಾದ ಸೂಚನಾ ಫಲಕಗಳು ಮತ್ತು ರಿಫ್ಲೆಕ್ಟರ್‌ಗಳಿಲ್ಲದೆ ಇತ್ತೀಚೆಗೆ ಕೆಲವು ಗಂಭೀರ ಅಪಘಾತಗಳು ಸಂಭವಿಸಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ.

2 ಜಂಟಿ ಸಮೀಕ್ಷೆ: ಟ್ರಾಫಿಕ್ ಪೊಲೀಸ್ ಮತ್ತು ಮಹಾನಗರ ಪಾಲಿಕೆ ತಂಡಗಳು ಜಂಟಿಯಾಗಿ ನಗರದ ವಿವಿಧೆಡೆ ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಸಂಚರಿಸಿ, ಹಗಲು ಮತ್ತು ರಾತ್ರಿ ವೇಳೆ ಹಂಪ್‌ಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿವೆ.  

3 24 ಗಂಟೆಯಲ್ಲಿ ತೆರವು: ನಗರದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿರುವ ಸುಮಾರು 22 ಹಂಪ್‌ಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ಮುಂದಿನ 24 ಗಂಟೆಯೊಳಗೆ ಸಂಪೂರ್ಣವಾಗಿ ತೆರವುಗೊಳಿಸಲು ಪಾಲಿಕೆ ನಿರ್ಧರಿಸಿದೆ.  

4 ವೈಜ್ಞಾನಿಕ ಬದಲಾವಣೆ: ತೆರವುಗೊಳಿಸಿದ ಜಾಗಗಳಲ್ಲಿ ರಸ್ತೆಯ ಅಗಲ ಮತ್ತು ವಾಹನಗಳ ದಟ್ಟಣೆಯನ್ನು ಆಧರಿಸಿ ಇಂಡಿಯನ್ ರೋಡ್ ಕಾಂಗ್ರೆಸ್ ಮಾನದಂಡದಂತೆ ಫೈಬರ್ ಹಂಪ್‌ಗಳು ಅಥವಾ ರಂಬ್ಲಿಂಗ್ ಹಂಪ್‌ಗಳನ್ನು ಅಳವಡಿಸಲಾಗುವುದು.

ಇದನ್ನೂ ಓದಿ – ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ

5 ಸುಧಾರಣಾ ಕ್ರಮಗಳು: ಕೆಲವು ಹಂಪ್‌ಗಳನ್ನು ಸಂಪೂರ್ಣವಾಗಿ ತೆಗೆಯುವ ಬದಲು, ಅವುಗಳಿಗೆ ರಿಫ್ಲೆಕ್ಟರ್ ಸ್ಟ್ರಿಪ್ಸ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

ಕಮಿಷನರ್‌ ನೈಟ್‌ ರೌಂಡ್ಸ್‌

ಹಂಪ್‌ಗಳಿಂದ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆ ಕುರಿತು ಶಿವಮೊಗ್ಗ ಲೈವ್.ಕಾಂ ನಿರಂತರ ವರದಿ ಹಿನ್ನೆಲೆ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಬೈಕ್‌ನಲ್ಲಿ ಸಿಟಿ ರೌಂಡ್ಸ್‌ ಮಾಡಿದ್ದಾರೆ. ಕಳೆದ ರಾತ್ರಿ ಖುದ್ದು ಬೈಕ್‌ನಲ್ಲಿ ನಗರದ ವಿವಿಧೆಡೆ ಸಂಚರಿಸಿದ ಮಾಯಣ್ಣಗೌಡ, ಯಾವ್ಯಾವ ರಸ್ತೆಯ ಹಂಪ್‌ಗಳಲ್ಲಿ ಸಮಸ್ಯೆ ಆಗುತ್ತಿದೆ ಎಂದು ಪರಿಶೀಲಿಸಿದ್ದಾರೆ. ಇಂದು ಪಾಲಿಕೆಯಲ್ಲಿ ಸಭೆ ನಡೆಸಿ, 22 ಹಂಪ್‌ಗಳನ್ನು ತೆರವು ಮಾಡಲು ನಿರ್ಧರಿಸಿದ್ದಾರೆ.  ಕಮಿಷನರ್‌ ಏನೆಲ್ಲ ಹೇಳಿದರು? ಇಲ್ಲಿದೆ ವಿಡಿಯೋ. 

Road Humps

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment