ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA | 16 ನವೆಂಬರ್ 2019
ಜೈಲ್ ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾಯ್ತು ಹುತ್ತ..! ಜನರನ್ನು ಭಯಬೀಳಿಸಿದವು ಬುಸ್ ಬುಸ್ ನಾಗಪ್ಪ..!
ಸಮರ್ಪಕವಾಗಿ ಗುಂಡಿ ಮುಚ್ಚದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಶಿವಮೊಗ್ಗದ ಪ್ರಜಾಕೀಯ ಪಕ್ಷ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು. ಇದನ್ನು ಕಂಡು ಜೈಲ್ ಸರ್ಕಲ್’ನಲ್ಲಿ ಜನರು ಆಶ್ಚರ್ಯಚಕಿತರಾದರು.
ಹೇಗಿತ್ತು ಪ್ರತಿಭಟನೆ?
ಇವತ್ತು ಬೆಳಗ್ಗೆ ಜೈಲ್ ಸರ್ಕಲ್’ನ ಮಧ್ಯಭಾಗದಲ್ಲಿ ಹುತ್ತದ ಮಾದರಿ ನಿರ್ಮಿಸಲಾಗಿತ್ತು. ಅದರ ಮೇಲೆ ಹೆಡೆ ಬಿಚ್ಚಿದ ಮಾದರಿಯಲ್ಲಿದ್ದ ಎರಡು ಪ್ಲಾಸ್ಟಿಕ್ ನಾಗರ ಹಾವುಗಳನ್ನು ಇರಿಸಲಾಗಿತ್ತು. ಹುತ್ತದ ಮಾದರಿ ಸುತ್ತ ಅರಿಶಿಣ, ಕುಂಕಮ ಹಚ್ಚಿ, ಹೂವಿನ ಹಾರ ಹಾಕಲಾಗಿತ್ತು. ಊದುಬತ್ತಿ ಹಚ್ಚಿಡಲಾಗಿತ್ತು. ಸರ್ಕಲ್ ಮಧ್ಯೆ ದಿಢೀರ್ ಪ್ರತ್ಯಕ್ಷವಾದ ಹುತ್ತು ಮತ್ತು ಅದಕ್ಕೆ ಮಾಡಲಾಗಿದ್ದ ಪೂಜೆ ಕಂಡು ವಾಹನ ಸವಾರರು ದಂಗಾದರು.
ಪ್ರತಿಭಟನೆಗೆ ಕಾರಣವೇನು?
ಜೈಲ್ ಸರ್ಕಲ್’ನ ಮಧ್ಯೆದಲ್ಲಿ ಗುಂಡಿ ಬಿದ್ದಿತ್ತು. ಅದನ್ನು ಮುಚ್ಚಿ, ಸಮತಟ್ಟು ಮಾಡುವ ಬದಲು, ರಸ್ತೆಯಿಂದ ಎರಡು ಅಡಿ ಎತ್ತರದಷ್ಟು ಮಣ್ಣು ಹಾಕಲಾಗಿದೆ. ಬೈಕ್ ಸವಾರರ ಪಾಲಿಗಂತು ಇದು ಯಮಸ್ವರೂಪಿಯಾಗಿತ್ತು. 24 ಗಂಟೆ ಕಳೆದರು ಯಾರೊಬ್ಬರು ಇದನ್ನು ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ.
ಪ್ರಜಾಕೀಯದಿಂದ ವಿಭಿನ್ನ ಪ್ರತಿಭಟನೆ
ಸರಿಯಾಗಿ ಗುಂಡಿ ಮುಚ್ಚದಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಶಿವಮೊಗ್ಗದ ಪ್ರಜಾಕೀಯ ಘಟಕ ವಿಭಿನ್ನ ಪ್ರತಿಭಟನೆ ನಡೆಸಿತು. ಪ್ರಜಾಕೀಯದ ಜಿಲ್ಲಾ ಸಂಚಾಲಕ ವೆಂಕಟೇಶ್, ಕೃಷ್ಣಮೂರ್ತಿ, ಡ್ಯಾನಿ, ಪ್ರದೀಪ್, ರಾಕೇಶ್, ಗೌತಮ್ ಅವರು ಹುತ್ತದ ಮಾದರಿ ನಿರ್ಮಿಸಿದರು. ಅದರ ಮುಂದೆ ರಾಜಕೀಯದ ಕೊಡುಗೆ ಎಂದು ಬೋರ್ಡು ನೆಟ್ಟರು. ಸವಾರರು ಇಲ್ಲಿ ಎಚ್ಚರದಿಂದ ವಾಹನ ಚಲಾಯಿಸುವಂತೆ ಜಾಗೃತಿ ಮೂಡಿಸಿದರು.
‘ಪ್ರಜೆಗಳೆ ಪ್ರಶ್ನೆ ಮಾಡಬೇಕು..’
ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಪ್ರಜಾಕೀಯದ ಜಿಲ್ಲಾ ಸಂಚಾಲಕ ವೆಂಕಟೇಶ್, ‘ರಾಜಕೀಯ ಕಾರಣಕ್ಕೆ ಜನರನ್ನು ಬೆದರಿಸುತ್ತಾರೆ. ಆದರೆ ಜನರೆ ಹೊರಗೆ ಬಂದು ಪ್ರಶ್ನೆ ಮಾಡಬೇಕು. ಆಗ ಇಂತಹ ಸಮಸ್ಯೆ ನಿವಾರಣೆಯಾಗುತ್ತದೆ. ಜನ ಜಾಗೃತಿಗಾಗಿ ವಿಭಿನ್ನವಾಗಿ ಪ್ರತಿಭಟಿಸಿದ್ದೇವೆ’ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
LATEST NEWS
- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

- ಸಾರ್ವಜನಿಕರೆ ಎಚ್ಚರ, ಹೊಸನಗರದಲ್ಲಿ ಮೆಸ್ಕಾಂ ಅಲರ್ಟ್ ಪ್ರಕಟ, ಏನಿದು?

About The Editor
ನಿತಿನ್ ಆರ್.ಕೈದೊಟ್ಲು





