‘ಔಷಧವಿಲ್ಲದೆ ರೋಗ ಗುಣ’, ಶಿವಮೊಗ್ಗ ಆದಿಚುಂಚನಗಿರಿ ಮಠದ ಸ್ವಾಮೀಜಿ ಸಲಹೆ, ಹೇಗದು?

Published On : ಮಾರ್ಚ್ 31, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನಮ್ಮ ಆರೋಗ್ಯ (Yoga) ಉತ್ತಮವಾಗಿದ್ದರೆ, ದೇಶದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿ ಹೇಳಿದರು.

ಶರಾವತಿ ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಯೋಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಶುದ್ಧಗಾಳಿಗೂ ಪರಿತಪಿಸುವಂತಾಗಿದೆ. ಶ್ವಾಸ-ನಿಶ್ವಾಸದ ಮೇಲೆ ನಮ್ಮ ಬದುಕು ನಿಂತಿದೆ. ಸರಿಯಾದ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದರೆ ಯಾವುದೇ ಮದ್ದಿಲ್ಲದೇ ರೋಗ ಹೋಗಲಾಡಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡಬೇಕು ಎಂದರು.

Yogotsava-at-Adichunchanagiri-Mutt-in-Shimoga

ಮೈಸೂರಿನ ವೇದವ್ಯಾಸ ಯೋಗ ಪ್ರತಿಷ್ಠಾನದ ಅಧ್ಯಕ್ಷ ವಸಂತಕುಮಾರ್ ಪೈ ಮಾತನಾಡಿದರು. ವಿಶ್ವಮಾನ್ಯತೆ ಪಡೆದ ಯೋಗಕ್ಕೆ ಈಗ ‘ಯೋಗ’ ಬಂದಿದೆ. ಯೋಗದಿಂದ ಸ್ವಾಸ್ಥ್ಯದ ಜೊತೆಗೆ, ಸರ್ವಾಂಗೀಣ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ರಾಷ್ಟ್ರೀಯ ಯೋಗ ಸಂಚಾಲಕ ರಾಘವೇಂದ್ರ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಮೂಹಿಕ ಯೋಗಾಭ್ಯಾಸ, ಯೋಗ ವಿಚಾರ ಸಂಕಿರಣ. ಯೋಗ ಪ್ರದರ್ಶನ, ಯೋಗದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ : ಸ್ಕೀಮ್‌ ಹೆಸರಲ್ಲಿ ಸಾವಿರಾರು ಜನರಿಗೆ ವಂಚನೆ ಆರೋಪ, ಉಡುಪಿಯ ವ್ಯಕ್ತಿ ಅರೆಸ್ಟ್‌

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 400ಕ್ಕೂ ಹೆಚ್ಚು ಯೋಗಪಟುಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಯೋಗಪಟು ಬ.ಮ. ಶ್ರೀಕಂಠ ಅವರಿಗೆ ಯೋಗಭೂಷಣ ಪ್ರಶಸ್ತಿ, ಮಣೂರು ಪ್ರಭಾಕರ ಪ್ರಭು ಅವರಿಗೆ ಕರ್ಮಯೋಗ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 31, 2026

Leave a Comment