ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ಜೆಎನ್ಎನ್ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಫೆಬ್ರವರಿ 28ರಂದು ಬೆಳಿಗ್ಗೆ 10.30ಕ್ಕೆ ಐಟಿ ಬಿಯಾಂಡ್ ಬೆಂಗಳೂರು (IT Beyond Bengaluru) ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೋಪಿನಾಥ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್ಕೆಸಿಸಿಐ) ಬೆಂಗಳೂರು ಮತ್ತು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಎಫ್ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಉಪಾಧ್ಯಕ್ಷ ಸಾಯಿ ರಾಮ್ ಪ್ರಸಾದ್, ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಹೆಚ್.ಎ.ಕಿರಣ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಉಪಾಧ್ಯಕ್ಷ ಚೇತನ್ ದೀಕ್ಷಿತ್ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಇದನ್ನೂ ಓದಿ – ಮೊಬೈಲ್ ಕ್ಯಾಂಟೀನ್ ಯೋಜನೆ, ಅರ್ಜಿ ಆಹ್ವಾನಿಸಿದ ಪ್ರವಾಸೋದ್ಯಮ ಇಲಾಖೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಫೆ. 28ರ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಮಂಥನ್ 2026 ಎಂಬ ಕೃತಕ ಬುದ್ಧಿಮತ್ತೆ ಕುರಿತ ಉಪನ್ಯಾಸ, ಚರ್ಚೆ ಮತ್ತು ಪ್ರಶೋತ್ತರ ಕಾರ್ಯಕ್ರಮ ನಡೆಯಲಿದೆ. ಎಐ ಪರಿಣಿತರಾದ ಕೃಪೇಶ್ ಮತ್ತು ರಾಜೀವ್ ದೀಕ್ಷಿತ್ ಉಪನ್ಯಾಸ ನೀಡುವರು. ಅಶೋಕ್ ಭಟ್, ಸುರೇಶ್ ಕುಮಾರ್, ಅಮಿತ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು ಎಂದು ಹೇಳಿದರು.
ಜಿ.ವಿಜಯಕುಮಾರ್, ಎ.ಎಂ.ಸುರೇಶ್, ಆರ್.ಮನೋಹರ್, ಎಸ್.ಎಸ್. ಉದಯ್ ಕುಮಾರ್, ಗಣೇಶ್ ಎಂ. ಅಂಗಡಿ, ಜಿ.ವಿ.ಕಿರಣ್ ಕುಮಾರ್, ರವಿಪ್ರಕಾಶ್ ಜನ್ನೆ ಉಪಸ್ಥಿತರಿದ್ದರು.
LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? | 27 ಫೆಬ್ರವರಿ 2026

- ರವೀಂದ್ರ ನಗರದಲ್ಲಿ ರಾತ್ರಿ ನಿಲ್ಲಿಸಿದ್ದ ಬೈಕ್ ಮಿಸ್ಸಿಂಗ್, ಆಗಿದ್ದೇನು?

- ಶಿವಮೊಗ್ಗದ JNN ಕಾಲೇಜಿನಲ್ಲಿ ಐಟಿ ಬಿಯಾಂಡ್ ಬೆಂಗಳೂರು, ಏನಿದು ಕಾರ್ಯಕ್ರಮ?

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಬದಲಾಯ್ತು ಹವಾಮಾನ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?

- ಮೊಬೈಲ್ ಕ್ಯಾಂಟೀನ್ ಯೋಜನೆ, ಅರ್ಜಿ ಆಹ್ವಾನಿಸಿದ ಪ್ರವಾಸೋದ್ಯಮ ಇಲಾಖೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

About The Editor
ನಿತಿನ್ ಆರ್.ಕೈದೊಟ್ಲು





