‘ರಾತ್ರಿ ಮನೆಗೆ ಬಂದು ಕರೆದೊಯ್ದು ಬೆಳಗಿನ ಜಾವ ಗುಂಡು ಹಾರಿಸಿದ್ದಾರೆ’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

ಶಿವಮೊಗ್ಗ | ರಾತ್ರಿ ಊಟ ಮಾಡುತ್ತಿದ್ದಾಗ ಮನೆಗೆ ಬಂದ ಪೊಲೀಸರು ತನ್ನ ಪತಿಯನ್ನು ಕರೆದೊಯ್ದು ಗುಂಡು ಹಾರಿಸಿದ್ದಾರೆ. ಬಳಿಕ ಸುಳ್ಳು ಆಪಾದನೆ ಹೊರಿಸಿದ್ದಾರೆ ಎಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್‌ಗೆ ಚೂರಿ ಇರಿತ ಪ್ರಕರಣದ ಪ್ರಮುಖ ಆರೋಪಿ ಜಬೀವುಲ್ಲಾನ ಪತ್ನಿ ಶಭಾನಾ ಆರೋಪಿಸಿದ್ದಾರೆ‌.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಭಾನಾ, ತನ್ನ ಗಂಡ ಜಬೀವುಲ್ಲಾ ಯಾವುದೆ ತಪ್ಪು ಮಾಡಿಲ್ಲ. ಆದರೆ ಆತನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದರು.

ಮಫ್ತಿಯಲ್ಲಿ ರಾತ್ರಿ ಬಂದರು ಪೊಲೀಸರು

ಆಗಸ್ಟ್ 15ರಂದು ಮಧ್ಯಾಹ್ನ ಜಬೀವುಲ್ಲಾ ನಮಾಜ್‌ಗೆ ತೆರಳಿದ್ದರು. ಮಧ್ಯಾಹ್ನ ತನಗೆ ಕರೆ ಮಾಡಿ ಇಲ್ಲಿ ಗಲಾಟೆ ಆಗುತ್ತಿದೆ ಎಂದು ತಿಳಿಸಿದ್ದರು. ಬೇಗ ಮನೆಗೆ ಬನ್ನಿ ಎಂದಾಗ ಮನೆಗೆ ಬಂದಿದ್ದರು.

ಇದನ್ನೂ ಓದಿ | ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡು ಹಾರಿಸಿ ಆರೋಪಿ ಬಂಧಿಸಿದ ಪೊಲೀಸರು

ಸಂಜೆ ವೇಳೆಗೆ ಎಂದಿನಂತೆ ನಮಾಜ್‌ಗೆ ಹೋಗಿ ವಾಪಸ್ ಮನೆಗೆ ಮರಳಿದ್ದರು. ರಾತ್ರಿ ‌9.30ರ ಹೊತ್ತಿಗೆ ಮಫ್ತಿಯಲ್ಲಿದ್ದ ಪೊಲೀಸರು ಮನೆಗೆ ಬಂದು, ಊಟ ಮಾಡುತ್ತಿದ್ದ ಜಬೀವುಲ್ಲಾನನ್ನು ಕರೆದುಕೊಂಡು ಹೋದರು‌‌. ಮತ್ತೆ ವಾಪಸ್ ಬಂದ ಪೊಲೀಸರು ನನ್ನ ಮೊಬೈಲ್ ಪಡೆದುಕೊಂಡು ಹೋದರು ಎಂದು ಶಭಾನಾ ಆರೋಪಿಸಿದರು.

ಶೂಟ್ ಮಾಡಿದ್ದು ಬೆಳಗ್ಗೆ ಗೊತ್ತಾಯ್ತು

ಬೆಳಗ್ಗೆ ಎದ್ದಾಗ ನಮ್ಮ ಪಕ್ಕದ ಮನೆಯವರು ನಿನ್ನ ಗಂಡನಿಗೆ ಪೊಲೀಸರು ಶೂಟ್ ಮಾಡಿದ್ದಾರೆ ಎಂದು ಹೇಳಿದರು. ಇದನ್ನು ಕೇಳಿ ಆಘಾತ ಉಂಟಾಯಿತು‌ ಎಂದು ತಿಳಿಸಿದರು‌.

ಚಾಕು ಸಿಗಲು ಹೇಗೆ ಸಾಧ್ಯ?

ಜಬಿವುಲ್ಲಾ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ. ಹಾಗಾಗಿ ಶೂಟ್ ಮಾಡಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಊಟ ಮಾಡುತ್ತಿದ್ದ ಜಬಿವುಲ್ಲಾನನ್ನು ಪೊಲೀಸರು ಮನೆಯಿಂದಲೇ ಕರೆದುಕೊಂಡು ಹೋಗಿದ್ದಾರೆ. ಹೀಗಿರುವಾಗ ಜಬಿವುಲ್ಲಾ ಬಳಿ ಚಾಕು ಬರುವುದಾದರೂ ಹೇಗೆ ಎಂದು ಶಭಾನಾ ಪ್ರಶ್ನಿಸಿದರು.

ಪೊಲೀಸರು ಜಬಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದು ರಾತ್ರಿ ಒಂಭತ್ತು ಮುಕ್ಕಾಲಿಗೆ. ಜಬಿ ಕಾಲಿಗೆ ಶೂಟ್ ಮಾಡಿದ್ದು ಬೆಳಗಿನ ಜಾವ ಎರಡುವರೆ ಗಂಟೆಗೆ. ಜಬಿ ಪೊಲೀಸರ ಮೇಲೆ ಹಲ್ಲೆ ನಡೆಸುವುದಾದರೆ ಮನೆಯಿಂದ ಕರೆದುಕೊಂಡು ಹೋಗುವಾಗಲೇ ಹಲ್ಲೆ ನಡೆಸುತ್ತಿದ್ದ. ಪೊಲೀಸರು ಕರೆದುಕೊಂಡು ಹೋದ ಮೇಲೆ ಜಬಿ ಕೈಗೆ ಚಾಕು ಸಿಗುವುದಾದರೂ ಹೇಗೆ ಎಂದು ಶಭಾನಾ ಪ್ರಶ್ನಿಸಿದ್ದಾರೆ.

ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ

ಜಬೀವುಲ್ಲಾ ಆರು ವರ್ಷದ ಹಿಂದೆ ಕೆಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆದರೆ ಕಳ್ಳತನ ಬಿಟ್ಟ ಬಳಿಕ ಆಟೋ ಓಡಿಸಿಕೊಂಡಿದ್ದ. ಈಗ ಸಾಲ ಮಾಡಿ ಹೊಸ ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದರು. ಆದರೆ ಎಂದೂ ಹೊಡದಾಟ ಪ್ರಕರಣಗಳಲ್ಲಿ ಭಾಗಿ ಆಗಿರಲಿಲ್ಲ ಎಂದು ಶಭಾನಾ ತಿಳಿಸಿದರು‌.

ಇದನ್ನೂ ಓದಿ | ಫ್ಲೆಕ್ಸ್ ವಿವಾದ, ಶಿವಮೊಗ್ಗದಲ್ಲಿ ಕೋಟಿ ಕೋಟಿ ನಷ್ಟ, ‘ಬ್ರ್ಯಾಂಡ್ ಶಿವಮೊಗ್ಗ’ಕ್ಕೆ ಕಪ್ಪು ಚುಕ್ಕೆ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment