ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MARCH 2021
ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಗಲಭೆಗೆ ಜೈ ಶ್ರೀರಾಮ್ ಘೋಷಣೆ ಕಾರಣವಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ ಹೇಳಿದ್ದಾರೆ.
ಇದನ್ನೂ ಓದಿ | ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಭದ್ರಾವತಿ ಪೊಲೀಸ್, ಮಧ್ಯಾಹ್ನದವರೆಗೆ ಗಡುವು ಕೊಟ್ಟ ಕಾಂಗ್ರೆಸ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರೇಗೌಡ ಅವರು, ವಂದೇ ಮಾತರಂ, ಜೈ ಶ್ರೀರಾಮ್ ಘೋಷಣೆಗೂ ಗಲಾಟೆಗೂ ಸಂಬಂಧವೇ ಇಲ್ಲ. ಬೇಕಂತಲೆ ಇದನ್ನು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಹತ್ತು ಲಕ್ಷದ ಮ್ಯಾಟ್
ಕಬಡ್ಡಿ ಪಂದ್ಯಾವಳಿ ನಡೆಸಲು ಹತ್ತು ಲಕ್ಷ ರೂ. ಮೌಲ್ಯದ ಮ್ಯಾಟ್ಗಳನ್ನು ಹಾಕಿಸಲಾಗಿತ್ತು. ಪಂದ್ಯಾವಳಿಯ ಬಳಿಕ ಆ ಮ್ಯಾಟ್ಗಳ ಮೇಲೆ ಪಟಾಕಿ ತಂದಿಟ್ಟಿದ್ದರು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಹತ್ತು ಲಕ್ಷದ ಮ್ಯಾಟ್ಗಳು ಹೋಗುತ್ತಿದ್ದವು. ಈ ಕಾರಣಕ್ಕೆ ಗಲಾಟೆಯಗಿದ್ದು ಎಂದರು.
ನಾವೇ ಮೊದಲು ಹೇಳಿದ್ದು
ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಅಂತೆಲ್ಲ ಮೊದಲು ಹೇಳಿದ್ದೇ ಕಾಂಗ್ರೆಸ್ ಪಕ್ಷ. ವರ್ಷಾನುಗಟ್ಟಲೆಯಿಂದ ಈ ಘೋಷಣೆ ಕೂಗುತ್ತಿರುವುದು ನಾವು. ಈಗ ಬಂದು ಘೋಷಣೆ ಕೂಗಿದ್ದಕ್ಕೆ ಗಲಭೆ ಅನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]