ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021
ಶಿವಮೊಗ್ಗ – ಬೆಂಗಳೂರು ಜನ ಶತಾಬ್ದ ರೈಲಿನ ಸಮಯ ಬದಲಾಗಿದೆ. ಎರಡು ದಿನದಿಂದ ಬದಲಾದ ಸಮಯದಲ್ಲಿ ರೈಲು ಸಂಚರಿಸುತ್ತಿದೆ. ಇದರ ಮಾಹಿತಿ ಇಲ್ಲದೆ ಪ್ರಯಾಣಿಕರು ಹಿಂದಿನ ಸಮಯಕ್ಕೆ ಅನುಗುಣವಾಗಿ ನಿಲ್ದಾಣಕ್ಕೆ ಬರುತ್ತಿದ್ದಾರೆ.
ಬದಲಾದ ಸಮಯ ಯಾವುದು?
ಜನ ಶತಾಬ್ದಿ ರೈಲು ಬೆಳಗ್ಗೆ 5.30ರ ಬದಲು 5.15ಕ್ಕೆ ಶಿವಮೊಗ್ಗದಿಂದ ಹೊರಡುತ್ತಿದೆ. ಹದಿನೈದು ನಿಮಿಷ ಮೊದಲು ರೈಲು ಸಂಚಾರ ಆರಂಭಿಸುತ್ತಿದೆ. ಈ ಮೊದಲು ಜನ ಶತಾಬ್ದ ರೈಲು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದವರೆಗೆ ಮಾತ್ರ ತೆರಳುತ್ತಿತ್ತು. ಆದರೆ ಈಗ ಮೆಜಸ್ಟಿಕ್ ರೈಲ್ವೆ ನಿಲ್ದಾಣದವರೆಗೆ ತಲುಪುತ್ತಿದೆ.
ಸಂಜೆ 5.30ರ ಬದಲು 5.15ಕ್ಕೆ ಬೆಂಗಳೂರಿನಿಂದ ಹೊರಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಬೆಂಗಳೂರಿನ ಮೆಜಸ್ಟಿಕ್‍ನಿಂದ ಶಿವಮೊಗ್ಗಕ್ಕೆ ಬರಲಿದೆ.
ಸಮಯ ಗೊತ್ತಾಗದೆ ಗೊಂದಲ
ರೈಲಿನ ಸಮಯ ಬದಲಾವಣೆ ಆಗಿರುವ ಕುರಿತು ರೈಲ್ವೆ ಇಲಾಖೆ ಈ ಮೊದಲೆ ಪ್ರಕಟಣೆ ಹೊರಡಿಸಿತ್ತು. ಆದರೆ ಆನ್‍ಲೈನ್‍ನಲ್ಲಿ ಟಿಕೆಟ್ ಖರೀದಿಸಿದ ಹಲವು ಪ್ರಯಾಣಿಕರಿಗೆ ರೈಲಿನ ಸಮಯ ಬದಲಾವಣೆಯ ಮಾಹಿತಿ ಇಲ್ಲದೆ ತಡವಾಗಿ ನಿಲ್ದಾಣಕ್ಕೆ ಬಂದು, ಗೊಂದಲಕ್ಕೀಡಾಗಿದ್ದಾರೆ. ತಡವಾಗಿ ರೈಲ್ವೆ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಇಲಾಖೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿದರು. ಜನವರಿ 31ರಿಂದ ಬದಲಾದ ಸಮಯದಲ್ಲಿ ರೈಲು ಸಂಚರಿಸುತ್ತಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200