ಶಿವಮೊಗ್ಗ ಲೈವ್.ಕಾಂ | SHIMOGA NEWS | 19 MARCH 2021
ರೈತರ ಮಹಾ ಪಂಚಾಯತ್‌ಗೆ ಜನತಾದಳ (ಸಂಯುಕ್ತ) ಬೆಂಬಲ ನೀಡಲಿದೆ ಎಂದು ಜೆಡಿಯು ರಾಜ್ಯ ರೈತ ಘಟಕದ ಅಧ್ಯಕ್ಷ ಡಿ.ಕೆ.ಶ್ರೀನಿವಾಸ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಮಾ.20 ರಂದು ನಡೆಯಲಿರುವ ರೈತರ ಮಹಾ ಪಂಚಾಯತ್ ಸಮಾವೇಶಕ್ಕೆ ಜೆಡಿಯು ತನ್ನ ಬೆಂಬಲ ನೀಡಿದೆ. ಅಪಾರ ಪ್ರಮಾಣದಲ್ಲಿ ಪಕ್ಷದ ಮುಖಂಡರನ್ನು ಮತ್ತು ಪಕ್ಷದಲ್ಲಿರುವ ರೈತರನ್ನು ಒಳಗೊಂಡು ಸಮಾವೇಶಕ್ಕೆ ಆಗಮಿಸುತ್ತೇವೆ. ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಸಹ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರವಿಕಿಶನ್, ಕಲಾವತಿ, ಶಶಿಧರಗೌಡರ್, ದೇವರಾಜು ಮುಂತಾದವರಿದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]