SHIVAMOGGA LIVE NEWS | KGF 2 MOVIE | 14 ಏಪ್ರಿಲ್ 2022
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಇವತ್ತು ಬಿಡುಗಡೆಯಾಗಿದೆ. ಶಿವಮೊಗ್ಗದಲ್ಲಿ ಚಿತ್ರಕ್ಕೆ ಅದ್ಧೂರಿ ಓಪನಿಂಗ್ ಸಿಕ್ಕಿದೆ. ಬೆಳಗ್ಗೆ ಫ್ಯಾನ್ ಶೋಗೆ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಬಂದಿದ್ದು ನಟ ಯಶ್ ಪರವಾಗಿ ಘೋಷಣೆ ಮೊಳಗಿಸಿದರು.
ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಫ್ಯಾನ್ ಷೋ ಆಯೋಜಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರ ನೋಡಲು ಆಗಮಿಸಿದ್ದರು.
ಅಪ್ಪು, ಯಶ್ ಪರ ಘೋಷಣೆ
KGF 2 MOVIE ಪ್ರದರ್ಶನ ವೇಳೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪರವಾಗಿ ಅಭಿಮಾನಿಗಳು ಘೋಷಣೆ ಕೂಗಿದರು. ಸಿನಿಮಾ ಆರಂಭದ ವೇಳೆ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಫೋಟೊ ಪ್ರದರ್ಶನವಾಗುತ್ತಿದ್ದಂತೆ ಅಭಿಮಾನಿಗಳು ಘೋಷಣೆ ಕೂಗಿ ನಮನ ಸಲ್ಲಿಸಿದರು.
ಇನ್ನು, ತೆರೆ ಮೇಲೆ ಯಶ್ ಎಂಟ್ರಿ ಆಗುತ್ತಿದ್ದಂತೆ ಚಪ್ಪಾಳೆ, ಶಿಳ್ಳೆ, ಘೋಷಣೆಗಳು ಮೊಳಗಿದವು. ಕೆಲವು ಅಭಿಮಾನಿಗಳು ಪರದೆ ಮುಂದೆ ಬಂದು ಕುಣಿದು, ಕುಪ್ಪಳಿಸಿದರು. ಸಿನಿಮಾದಲ್ಲಿ ನಟ ಯಶ್ ಅವರು ಪಂಚ್ ಡೈಲಾಗ್’ಗಳು, ಸ್ಟಂಟ್’ಗಳನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದರು.
ಸಿಟಿಯಲ್ಲಿ ಮೂರು ಚಿತ್ರಮಂದಿರ
ಶಿವಮೊಗ್ಗ ನಗರದ ಮೂರು ಚಿತ್ರಮಂದಿರದಲ್ಲಿ ಕೆಜಿಎಫ್ 2 ಸಿನಿಮಾ ಪ್ರದರ್ಶನವಾಗುತ್ತಿದೆ. ನಗರದ ಮಲ್ಲಿಕಾರ್ಜುನ, ವೀರಭದ್ರೇಶ್ವರ ಮತ್ತು ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.
ಮತ್ತೊಂದೆಡೆ ಭದ್ರಾವತಿ, ಸಾಗರ, ಶಿಕಾರಿಪುರದಲ್ಲಿಯು ಕೆಜಿಎಫ್ 2 ಸಿನಿಮಾ ತೆರೆ ಕಂಡಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200