ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 DECEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ. ಶಿವಮೊಗ್ಗದಲ್ಲಿಯೇ ಚರ್ಚೆ ನಡೆಯಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸವಾಲು ಹಾಕಿದ್ದಾರೆ.
ಕಿಮ್ಮನೆ ಸವಾಲು – ಇಲ್ಲಿದೆ 5 ಪಾಯಿಂಟ್
ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸನಾತನ ಧರ್ಮದ ಕುರಿತು ಚರ್ಚೆಗೆ ವೇದಿಕೆ ಆಗಬಾರದು ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಆದರೆ ಸನಾತನ ಧರ್ಮದ ಕುರಿತು ಚರ್ಚೆ ಯಾಕೆ ನಡೆಯಬಾರದು. ನಿಘಂಟಿನಲ್ಲಿ ಸನಾತನ ಧರ್ಮ ಎಂದರೆ ಹಿಂದಿನದ್ದು ಎಂಬ ಅರ್ಥವಿದೆ. ಇದಕ್ಕೆ ಪ್ರತ್ಯೇಕ ಕೃತಿಕಾರ, ಸಾಹಿತಿ ಇಲ್ಲ. ಈ ಬಗ್ಗೆ ಈಶ್ವರಪ್ಪ ಮತ್ತು ಆರಗ ಜ್ಞಾನೇಂದ್ರ ಬಹಿರಂಗ ಚರ್ಚೆಗೆ ಬರಲಿ.
ನಾನು ಕೂಡ ಹಿಂದೂ ಧರ್ಮಕ್ಕೆ ಸೇರಿದವನೆ. ದೇವರಲ್ಲಿ ನಂಬಿಕೆ ಇದೆ. ಹೋಮ – ಹವನ ಮಾಡಿಸಿದ್ದೇನೆ. ಶಾಸಕ, ಸಚಿವನಾಗಿದ್ದಾಗ ವೈಯಕ್ತಿಕ ಮತ್ತು ಸರ್ಕಾರದ ಅನುದಾನ ಸೇರಿ ಸುಮಾರು 50 ಕೋಟಿ ರೂ.ಗಳನ್ನು ದೇವಾಲಯಕ್ಕೆ ನೀಡಿದ್ದೇನೆ. ಆದರೆ ಹಿಂದೂ ಧರ್ಮದಲ್ಲಿನ ಮಾನವೀಯತೆಯ ವಿರುದ್ಧದ ಅಂಶಗಳನ್ನು ತೊಡೆದು ಹಾಕಬೇಕು ಎಂದು ಪ್ರತಿಪಾದಿಸುತ್ತೇನೆ.
ಬಿಜೆಪಿಯಲ್ಲಿಯು ದಲಿತರು ಶಾಸಕರಾಗಿದ್ದಾರೆ. ಇದು ಆರ್‌ಎಸ್‌ಎಸ್‌ನ ಹೋರಾಟದ ಫಲವಲ್ಲ. ಬದಲಾಗಿ ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿ. ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷ ಸಮೀಪಿಸುತ್ತಿದೆ. ಅಸ್ಪೃಶ್ಯತೆ ನಿವಾರಣೆಗೆ ಆರ್‌ಎಸ್‌ಎಸ್ ರೂಪಿಸಿರುವ ಒಂದು ಯೋಜನೆ ಇದೆಯೇ?
ಕೃಷಿ ಪಂಪ್‌ಸೆಟ್‌ಗಳು ಟ್ರಾನ್ಸ್‌ಪಾರ್ಮರ್‌ನಿಂದ 500 ಮೀಟರ್ ದೂರದಲ್ಲಿದ್ದರೆ ಸೋಲಾರ್ ಸಂಪರ್ಕ ಪಡೆಯಬೇಕು ಎಂದು ಆದೇಶವಾಗಿದ್ದೇ ಬಿಜೆಪಿ ಸರ್ಕಾರದಲ್ಲಿ. ಈಗ ಅದರ ವಿರುದ್ಧ ಶಾಸಕರು ತೀರ್ಥಹಳ್ಳಿಯಲ್ಲಿ ಹೋರಾಟಕ್ಕಿಳಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು ಪ್ರಶ್ನಿಸಿದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ ಹುಂಚದಕಟ್ಟೆ, ಅವರ ತಂದೆ ವಿರುದ್ಧ ಶಾಸಕರು ಹೇಳಿಕೆ ನೀಡಿರುವುದು ಖಂಡನಾರ್ಹ.
ತಾವೆಂದು ಎಂಜಲು ಕಾಸಿಗೆ ಕೈ ಒಡ್ಡಿಲ್ಲ. ಆದರೆ ಕೆಲವರು ಸಾರ್ವಜನಿಕರ ಸೇವೆ ಮಾಡುತ್ತ ಶ್ರೀಮಂತರಾಗಿದ್ದಾರೆ. 1983ರ ಚುನಾವಣೆಯಲ್ಲಿ ಬಡವರಾಗಿದ್ದವರು ಈಗ ಶ್ರೀಮಂತರಾಗಿರುವುದು ಹೇಗೆ? ಸದಾ ಜನರ ಸೇವೆ ಮಾಡುತ್ತಿರುವ ಅವರಿಗೆ ದುಡಿಮೆ ಮಾಡಲು ಸಮಯ ಸಿಕ್ಕಿದ್ದಾದರೂ ಹೇಗೆ?
ಇದನ್ನೂ ಓದಿ – ಶಿಕಾರಿಪುರದಲ್ಲಿ ಜಿಲ್ಲಾಧಿಕಾರಿ ಜನತಾ ದರ್ಶನ, ದಿನಾಂಕ ಫಿಕ್ಸ್, ಎಲ್ಲಿ ನಡೆಯಲಿದೆ?