ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜೂನ್ 2020
ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ನಾನು ಪೂರಕವಾಗಿದ್ದೇನೆ. ಪರೀಕ್ಷೆ ನಡೆಯುವ ದಿನ ಬೇಕಾದರೆ ರಾಜ್ಯಾದ್ಯಂತ ಸಂಪೂರ್ಣ ಸೀಲ್ ಡೌನ್ ಮಾಡಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಲಹೆ ನೀಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಕರೋನ ಸೋಂಕಿನ ಒತ್ತಡ ನಿವಾರಿಸುವ ಸಲುವಾಗಿ ಸಂಪೂರ್ಣ ಸೀಲ್ ಡೌನ್ ಮಾಡಲಿ. ಒಂದು ದಿನ ಮಕ್ಕಳಾಗಿ ನಾವೆಲ್ಲ ತ್ಯಾಗ ಮಾಡೋಣ ಎಂದರು.
ಗೊಂದಲ ನಿರ್ಮಿಸುವುದು ಬೇಡ
ಪರೀಕ್ಷೆ ನಡೆಯಲಿದೆಯೋ, ಇಲ್ಲವೋ ಅನ್ನುವ ಕುರಿತು ಗೊಂದಲ ಇರಬಾರದು. ಇದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕಲಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಸಂಬಂಧವಿಲ್ಲದವರು ಮಾತನಾಡುವುದು ಬೇಡ ಎಂದರು.
ಪರೀಕ್ಷೆ ನಡೆಸುಂತೆ ಮಿನಿಸ್ಟರ್‌ಗೆ ಸಲಹೆ
ಕಳೆದ ತಿಂಗಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕರೆ ಮಾಡಿ ಅಭಿಪ್ರಾಯ ಕೇಳಿದ್ದರು. ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲೇಬೇಕು ಎಂದು ತಿಳಿಸಿದ್ದೆ. ಪರೀಕ್ಷೆ ವೇಳೆ ಮುಂಜಾಗ್ರತಾ ಕ್ರಮಗಳ ಕುರಿತು ಹೇಳಿದ್ದೆ. ನಮ್ಮಲ್ಲಿ ಒಂದರಿಂದ ಒಂಭತ್ತನೆ ತರಗತಿವರೆಗೆ ಫೇಲ್ ಮಾಡುವಂತಿಲ್ಲ ಎಂಬ ಕಾನೂನು ಇದೆ. ಒಂದು ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ನಡೆಸದೆ ಇದ್ದರೆ ವಿದ್ಯಾರ್ಥಿಗಳ ಕಲಿಕೆಯ ಗುಣಮುಟ್ಟ ಕುಸಿಯಲಿದೆ ಎಂದು ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ಆನ್‍ಲೈನ್ ಶಿಕ್ಷಣ ಬೇಡ
ಏಳನೆ ತರಗತಿವರೆಗೆ ಆನ್‍ಲೈನ್ ಶಿಕ್ಷಣ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಸಚಿವರು, ತೀರ್ಥಹಳ್ಳಿ, ಶಿರಸಿ ವಿಧಾನಸಭೆ ಕ್ಷೇತ್ರಗಳಲ್ಲಿ ಬಹುಭಾಗ ಅರಣ್ಯವಿದೆ. ಇಲ್ಲಿ ನೆಟ್‍ವರ್ಕ್ ಸಿಗುವುದಿಲ್ಲ. ಸರ್ಕಾರಗಳು ಶ್ರೀಮಂತರು ಮತ್ತು ನಗರದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದರು.
ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ, ಪತ್ರಕರ್ತ ಚಂದ್ರಹಾಸ್ ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]