ಶಿವಮೊಗ್ಗದಲ್ಲಿ KSRTC ಬಸ್ ಸಂಚಾರ ಶುರು, ಹೇಗಿತ್ತು ಮೊದಲ ದಿನದ ಪ್ರಯಾಣ? ಎಷ್ಟು ಬಸ್ಸುಗಳು ರಸ್ತೆಗಿಳಿದಿದ್ದವು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 5 ಮೇ 2020

ಶಿವಮೊಗ್ಗದಲ್ಲಿ ಸೋಮವಾರದಿಂದ KSRTC ಬಸ್ ಸಂಚಾರ ಆರಂಭವಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಈ ಬಸ್‍ಗಳು ಸಂಪರ್ಕ ಕಲ್ಪಿಸಲಿವೆ.

ಸರತಿ ಸಾಲು, ಸಾಮಾಜಿಕ ಅಂತರ

ಪ್ರಯಾಣಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ವೃತ್ತಗಳನ್ನು ಬರೆಯಲಾಗಿತ್ತು. ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಈ ಸರ್ಕಲ್‍ನ ಒಳಗೆ ನಿಲ್ಲಿಸಲಾಗುತ್ತಿತ್ತು. ಪ್ರತಿ ಪ್ರಯಾಣಿಕರಿಗೂ ಪರೀಕ್ಷೆ ಬಳಿಕ ಬಸ್‌ ಹತ್ತಲ ಅವಕಾಶ ಕಲ್ಪಿಸಲಾಗಿತ್ತು.

95561728 1113367139024705 3021859081599057920 n.jpg? nc cat=101& nc sid=8024bb& nc ohc=uytnmmpfyFoAX ehTQH& nc ht=scontent.fblr1 4

ಪ್ರಯಾಣಿಕರ ಮಾಹಿತಿ, ಸ್ಯಾನಿಟೈಸರ್

ಇನ್ನು, ಬಸ್ ಹತ್ತುವ ಪ್ರತಿ ಪ್ರಯಾಣಿಕರ ಮಾಹಿತಿಯನ್ನು ಸಂಗ್ರಹಿಸಲಾಯಿತು. ಹೆಸರು, ಮೊಬೈಲ್‍ ನಂಬರ್ ಬರೆದುಕೊಳ್ಳಲಾಯಿತು. ಅಲ್ಲದೆ ಬಸ್ ಹತ್ತುವ ಮೊದಲು ಪ್ರಯಾಣಿಕರ ಕೈಗೆ ಸ್ಯಾನಿಟೈಸರ್‍ ಹಾಕಲಾಯಿತು.

95734035 1113366742358078 7378898589285613568 n.jpg? nc cat=105& nc sid=8024bb& nc ohc=PAtaaM9jqNoAX yfagT& nc ht=scontent.fblr1 4

ಅರ್ಧಕ್ಕರ್ಧ ಸೀಟಿನಲ್ಲಷ್ಟೇ ಪ್ರಯಾಣಿಕರು

ಬಸ್ಸಿನ ಒಳಗೆ ಪ್ರಯಾಣಿಕರು ಕೂರುವಾಗಲು ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿತ್ತು. ಮೂರು ಜನ ಕೂರಬೇಕಿದ್ದ ಸೀಟಿನಲ್ಲಿ ಇಬ್ಬರಿಗಷ್ಟೆ ಅವಕಾಶ. ಇನ್ನು ಎರಡು ಮಂದಿ ಕೂರುವ ಸೀಟಿನಲ್ಲಿ ಒಬ್ಬರು ಮಾತ್ರ ಕೂರಬೇಕಿತ್ತು.

95689787 1113367222358030 648238606531428352 n.jpg? nc cat=102& nc sid=8024bb& nc ohc=VJXQNRxBaPAAX8Yg0S5& nc ht=scontent.fblr1 3

ಎಲ್ಲ ತಾಲೂಕಿಗೆ ಹೋದ ಬಸ್ಸುಗಳು

ಶಿವಮೊಗ್ಗದಿಂದ ಎಲ್ಲ ತಾಲೂಕಿಗು ಬಸ್ಸಿನ ವ್ಯವಸ್ಥೆ ಮಾಡುವುದಾಗಿ ಸಾರಿಗೆ ನಿಗಮ ತಿಳಿಸಿತ್ತು. ಈ ಹಿನ್ನೆಯಲ್ಲಿ ಶಿವಮೊಗ್ಗದಿಂದ ಸಾಗರ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ, ಸೊರಬ, ಶಿಕಾರಿಪುರಕ್ಕೆ ಬಸ್ಸುಗಳು ತೆರಳಿವೆ. ಪ್ರಯಾಣಿಕರ ಸಂಖ್ಯೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಲಾಯಿತು.

95138857 1113367292358023 5296539783797932032 n.jpg? nc cat=102& nc sid=8024bb& nc ohc=Po6f9oSfr1YAX KLE3M& nc ht=scontent.fblr1 3

ಮೊದಲ ದಿನ ಎಷ್ಟು ಬಸ್‌ ಸಂಚಾರ?

ಮೊದಲ ದಿನ 43 ಬಸ್‌ಗಳು ಸಂಚಾರ ಮಾಡಿವೆ. ಶಿವಮೊಗ್ಗದಿಂದ ಸಾಗರ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿಗೆ ಹೆಚ್ಚಿನ ಪ್ರಯಾಣಿಕರು ತೆರಳಿದ್ದಾರೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ.

95392800 1113367389024680 8138982503596687360 n.jpg? nc cat=106& nc sid=8024bb& nc ohc=7oi8osATjbEAX83Gq4M& nc ht=scontent.fblr1 3
95360267 1113367495691336 7528209931875385344 n.jpg? nc cat=101& nc sid=8024bb& nc ohc=C7V2reTMwOgAX85gEjd& nc ht=scontent.fblr1 4
95132241 857973851349193 1704349070090305536 n.jpg? nc cat=109& nc sid=dd9801& nc ohc=P I5w 5gfgcAX 79J3x& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment