ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 19 ನವೆಂಬರ್ 2019
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕುರುಬ ಸಂಘ ಒತ್ತಾಯಿಸಿದೆ.
ಕುರುಬ ಸಮಾಜದ ಶ್ರೀ ಈಶ್ವರಾನಂದ ಸ್ವಾಮೀಜಿ ಅವರಿಗೆ ಸಚಿವ ಮಾಧುಸ್ವಾಮಿ ಅವರು ಅಗೌರವ ತೋರಿದ್ದಾರೆ. ಹಾಗಾಗಿ ಸಚಿವರು ಕೂಡಲೇ ಸ್ವಾಮೀಜಿ ಅವರ ಕ್ಷಮೆಯಾಚಿಸಬೇಕು ಮತ್ತು ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕುರುಬ ಸಂಘ ಒತ್ತಾಯಿಸಿದೆ.
ಡಿಸಿ ಆಫಿಸ್ ಮುಂದೆ ಧಿಕ್ಕಾರದ ಘೋಷಣೆ
ಸಚಿವ ಮಾಧುಸ್ವಾಮಿ ಅವರು ಸ್ವಾಮೀಜಿ ಅವರಿಗೆ ನಿಂದಿಸಿದ್ದಾರೆ. ಇದು ಇಡೀ ಕುರುಬ ಸಮಾಜಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿ, ಕುರುಬ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಶರತ್, ರವಿಕುಮಾರ್, ಕುಮಾರ್, ಮಲ್ಲಿಕಾರ್ಜುನ್, ಕೇಶವ, ಮನೋಹರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಧಮಕಿ ಹಾಕಿ ಉದ್ಧಟತನ ತೋರಿದ್ದಾರೆ
ಸಚಿವ ಮಾಧುಸ್ವಾಮಿ ಅವರು ಸಭೆಯೊಂದರಲ್ಲಿ ಸ್ವಾಮೀಜಿ ಅವರಿಗೆ ಧಮಕಿ ಹಾಕಿ ಉದ್ಧಟತನ ತೋರಿಸಿದ್ದಾರೆ. ಶ್ರೀಗಳ ಕಡೆಗೆ ಕೈ ತೋರಿಸಿ ಮಾತನಾಡಿದ್ದಾರೆ. ಸ್ವಾಮೀಜಿಗೆ ಅಗೌರವ ತೋರಿರುವ ಮಾಧುಸ್ವಾಮಿ ಅವರು ಶ್ರೀಗಳ ಕ್ಷಮೆ ಕೋರಬೇಕು ಮತ್ತು ಕೂಡಲೆ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಕಾರ್ಯದರ್ಶಿ ಕೆ.ರಂಗನಾಥ್ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ. ರಾಮಕೃಷ್ಣ, ವಾಟಾಳ್ ಮಂಜುನಾಥ್, ಶ್ರೀನಿವಾಸ್ ಒಡ್ಡಪ್ಪ, ರಾಮಿನಕೊಪ್ಪ ರಘು ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಏನಿದು ಘಟನೆ?
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ವ್ಯಾಪ್ತಿಯಲ್ಲಿ ವೃತ್ತವೊಂದಕ್ಕೆ ಹೆಸರಿಡುವ ಕುರಿತು ಗೊಂದಲ ನಿರ್ಮಾಣವಾಗಿದೆ. 2006ರಲ್ಲಿ ಸರ್ಕಲ್ ಸ್ಥಾಪನೆಯಾದಾಗ ಅದಕ್ಕೆ ಕನಕದಾಸ ಸರ್ಕಲ್ ಎಂದು ಹೆಸರಿಡಲಾಗಿತ್ತು. ಇತ್ತೀಚೆಗೆ ರಸ್ತೆ ರಿಪೇರಿಗಾಗಿ ಕನಕದಾಸರ ಹೆಸರಿದ್ದ ಬೋರ್ಡ್ ತೆರವು ಮಾಡಲಾಗಿತ್ತು. ಈಗ ವೃತ್ತಕ್ಕೆ ಕನಕದಾಸರ ಹೆಸರನ್ನೆ ಮುಂದುವರೆಸಬೇಕು ಎಂದು ಶ್ರೀ ಈಶ್ವರಾನಂದ ಸ್ವಾಮೀಜಿ ಅವರು ಸಭೆಯೊಂದರಲ್ಲಿ ಪ್ರಸ್ತಾಪಿಸಿದರು. ಕೆಲವರು ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಕಾನೂನು ಸಚಿವ ಮಾಧುಸ್ವಾಮಿ ಅವರು ಶ್ರೀ ಈಶ್ವರಾನಂದ ಸ್ವಾಮೀಜಿ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆಯುತ್ತಿವೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422