ಶಿವಮೊಗ್ಗ ಉಪ ಮೇಯರ್ ಸ್ಥಾನಕ್ಕೆ ನಮ್ಮ ಕಾರ್ಪೊರೇಟರ್‌ ಹೆಸರು ಪರಿಗಣಿಸಿ, ಮಿನಿಸ್ಟರ್‌‌ಗೆ ಮನವಿ

ಶಿವಮೊಗ್ಗ
LIVE

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2021

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಅಧಿಕಾರವಧಿ ಮುಗಿದಿದೆ. ನೂತನ ಮೇಯರ್, ಉಪ ಮೇಯರ್‌ಗೆ ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಈ ನಡುವೆ ತಮ್ಮ ವಾರ್ಡ್‌ನ ಕಾರ್ಪೊರೇಟರ್‌ ಹೆಸರನ್ನು ಈ ಸ್ಥಾನಗಳಿಗೆ ಪರಿಗಣಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪಾಲಿಕೆ ಎರಡನೆ ವಾರ್ಡ್‌ನ ನಿವಾಸಿಗಳು ತಮ್ಮ ಕಾರ್ಪೊರೇಟರ್ ವಿಶ್ವಾಸ್ ಅವರನ್ನು ಉಪ ಮೇಯರ್ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ. ಸಚಿವ ಕೆ‌.ಎಸ್.ಈಶ್ವರಪ್ಪ ಅವರನ್ನು ಇವತ್ತು ಭೇಟಿಯಾಗಿ ಮನವಿ ಸಲ್ಲಿಸಿದರು.

ಎರಡನೆ ವಾರ್ಡ್‌ ವ್ಯಾಪ್ತಿಯ ಎಲ್‌ಬಿಎಸ್ ನಗರ, ಅಶ್ವತ್ಥನಗರ, ಕೀರ್ತಿ ನಗರ ನಿವಾಸಿಗಳು ಮನವಿ ಸಲ್ಲಿಸಿದರು‌.

ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಾಗಿದೆ. ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment