ಶಿವಮೊಗ್ಗ ಲೈವ್.ಕಾಂ | SHIMOGA | 18 ಫೆಬ್ರವರಿ 2020
ಮ್ಯಾಮ್ಕೋಸ್ ನಿರ್ದೇಶಕರ ಸ್ಥಾನಕ್ಕೆ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದಿಂದ 19 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮತದಾರರು ಬೆಂಬಲ ನೀಡಬೇಕು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮನವಿ ಮಾಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನ ಸ್ಥಾಪಿಸಿಕೊಂಡಿದ್ದೇವೆ. ಇದರ ನೇತೃತ್ವದಲ್ಲಿ 19 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದರು.
ಸಹಕಾರ ಭಾರತಿಯವರು ಇದನ್ನು ಸ್ಪಷ್ಟಪಡಿಸಲಿ
ಅಡಕೆ ಹಾನಿಕಾರಕ ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಷಾ ಅವರು, ಇಲ್ಲಿ ಬಂದು ಅಡಕೆ ಬೆಳೆಗಾರರ ಹಿತ ಕಾಯುವುದಾಗಿ ತಿಳಿಸುತ್ತಾರೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು. ಅಲ್ಲದೆ ಈ ಹೇಳಿಕೆ ಹಿಂಪಡೆಯಬೇಕು ಎಂದು ಸಹಕಾರ ಭಾರತಿ ಒತ್ತಾಯಿಸಬೇಕು ಎಂದು ಸವಾಲು ಹಾಕಿದರು.
ಪರಿಹಾರ ಒದಗಿಸಲು ಇವರಿಗೆ ಸಾದ್ಯವಾಗಿಲ್ಲ
ಅಡಕೆಗೆ ಕೊಳೆ ರೋಗ ಬಂದಿದೆ. ಫಸಲು ಕಡಿಮೆಯಾಗಿದೆ. ಸಹಕಾರ ಭಾರತಿ ಕಡೆಯಿಂದ ರೈತರಿಗೆ ಪರಿಹಾರ ಕೊಡಿಸಲು ಸಾದ್ಯವಾಗಲಿಲ್ಲ. ಅವರ ಕಡೆಯಿಂದ ಪರಿಹಾರ ಕೊಡಿಸಲು ಆಗಿದೆ ಅನ್ನುವುದಿದ್ದರೆ ಸಾಬೀತು ಪಡಿಸಿಲಿ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಚುನಾವಣೆಗೆ ಯಾರೆಲ್ಲ ಸ್ಪರ್ಧಿಸಿದ್ದಾರೆ
ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ವತಿಯಿಂದ 19 ಅಭ್ಯರ್ಥಿಗಳು ಕಣಕ್ಕಿಳಿಸಲಾಗಿದೆ. ಅನ್ನಪೂರ್ಣ ಮೋಹನ್ (ಮಹಿಳಾ ಮೀಸಲು), ಜಯರಾಂ.ಎಂ.ವಿ, ತಾರಕೇಶ್ವರ್.ಎನ್.ಜಿ, ಎನ್.ಎಂ.ದಯಾನಂದ್, ಕಡ್ತೂರು ದಿನೇಶ್, ಹರತಾಳು ನಾಗರಾಜ್ (ಬಿಸಿಎಂಬಿ ಮೀಸಲು), ಪದ್ಮನಾಭ್ ಹಾರೋಗೊಳಿಗೆ, ಕೆ.ಬಿ.ಭದ್ರಪ್ಪ (ಪರಿಶಿಷ್ಟ ಪಂಗಡ ಮೀಸಲು), ಭಾರತಿ ಆರ್.ಹೆಗಡೆ (ಮಹಿಳಾ ಮೀಸಲು), ಹೆಚ್.ಜಿ.ಮಲ್ಲಯ್ಯ, ರಾಮಾನಂದ್ ಎನ್.ಎನ್, ರಮೇಶ್ ಯಡಗೆರೆ, ರಂಗನಾಥ ಪಿ.ಎನ್, ಹೆಚ್.ಎನ್.ಲಕ್ಷ್ಮಣಪ್ಪ (ಪರಿಶಿಷ್ಟ ಜಾತಿ ಮೀಸಲು), ಬಿ.ಹೆಚ್.ಲಿಂಗರಾಜ್, ಶೃಂಗೇರಿ ವಿಜಯಕುಮಾರ್.ಎ.ಆರ್, ಖಾಂಡ್ಯ ವೆಂಕಟೇಶ್, ಶ್ರೀನಿವಾಸ ಕೆ.ಆರ್, ಕೊರಂಬಳ್ಳಿ ಷಣ್ಮುಖಪ್ಪ ಸ್ಪರ್ಧಿಸಿದ್ದಾರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕಡಿದಾಳ್ ಗೋಪಾಲ್, ಶಿವಮೊಗ್ಗ ಪಾಲಿಕೆ ಕಾರ್ಪೊರೇಟರ್ ರಮೇಶ್ ಹೆಗ್ಡೆ ಸೇರಿದಂತೆ ಹಲವರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]