ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 1 ಏಪ್ರಿಲ್ 2020
ಅಪರಿಚಿತ ವ್ಯಕ್ತಿಯೊಬ್ಬನನ್ನು ಆಂಬುಲೆನ್ಸ್’ನಲ್ಲಿ ಕರೆತಂದು ಮನೆಯೊಂದರ ಮುಂದೆ ಬಿಡಲಾಗಿದೆ. ಕೆಲವೇ ಗಂಟೆಯಲ್ಲಿ ಆ ವ್ಯಕ್ತಿ ಪ್ರಾಣಿ ಬಿಟ್ಟಿದ್ದಾನೆ. ಇದು ಶಿವಮೊಗ್ಗದ ರತ್ನಗಿರಿ ಬಡಾವಣೆಯಲ್ಲಿ ಕೆಲಕಾಲ ‘ಕರೋನ’ ಆತಂಕ ಸೃಷ್ಟಿಸಿತ್ತು.
ಮೃತನನ್ನು ಮಂಜುನಾಥ್ (68) ಎಂದು ಗುರುತಿಸಲಾಗಿದೆ. ಅಬ್ಬಲಗೆರೆ ಸಮೀಪದ ರತ್ನಗಿರಿ ಬಡಾವಣೆಯಲ್ಲಿ ಮಧ್ಯಾಹ್ನ ಘಟನೆ ನಡೆದಿದೆ.
ಆಂಬುಲೆನ್ಸ್’ನಲ್ಲಿ ಕರೆತಂದಿದ್ದು ಏಕೆ?
ಮಂಜುನಾಥ್’ನನ್ನು ರಾಮನಗರ ಜಿಲ್ಲೆಯ ಕನಕಪುರದಿಂದ ಶಿವಮೊಗ್ಗದ ಅಬ್ಬಲಗೆರೆಗೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಬುಲೆನ್ಸ್ ಒಂದರಲ್ಲಿ ಮಂಜುನಾಥ್ ಅವರನ್ನು ಕರೆತಂದು, ರತ್ನಗಿರಿ ಬಡಾವಣೆಯ ಮನೆ ಮುಂದೆ ಇಳಿಸಲಾಗಿದೆ. ಈ ಕುರಿತು ಸ್ಥಳೀಯರು ಪ್ರಶ್ನಿಸಿದಾಗ, ಸರಿಯಾದ ಉತ್ತರ ನೀಡದೆ ಆಂಬುಲೆನ್ಸ್’ನವರು ತೆರಳಿದ್ದಾರೆ.
ಕೆಲವೇ ಗಂಟೆಯಲ್ಲಿ ಹಾರಿ ಹೋಯ್ತು ಪ್ರಾಣ ಪಕ್ಷಿ
ರತ್ನಗಿರಿ ಬಡಾವಣೆಯಲ್ಲಿ ಮಂಜುನಾಥ್ ಅವರ ಪತ್ನಿಯ ಮನೆಯಿದೆ. ಇದೇ ಮನೆ ಮುಂದೆಯೇ ಮಂಜುನಾಥ್ ಅವರನ್ನು ಆಂಬುಲೆನ್ಸ್’ನಿಂದ ಇಳಿಸಲಾಗಿದೆ. ಆದರೆ ಮನೆಯಲ್ಲಿ ಮಂಜುನಾಥ್ ಅವರ ಪತ್ನಿ ಸೇರಿದಂತೆ ಯಾರೊಬ್ಬರು ಇರಲಿಲ್ಲ. ಅವರೆಲ್ಲ ದಾವಣಗೆರೆಯಲ್ಲಿರುವ ತವರು ಮನೆಗೆ ತೆರಳಿದ್ದರು. ಹಾಗಾಗಿ ಮನೆಯೊಳಗೆ ಹೋಗಲು ಬೀಗ ಇಲ್ಲದೆ ಗೇಟ್ ಮುಂದೆಯೆ ಬಿಸಲಲ್ಲಿ ಕುಳಿತಿದ್ದಾರೆ. ಬಿಸಿಲು ಜೋರಾದ್ದ ಪರಿಣಾಮ ಕೆಲವರು ನೀರು ಕೊಟ್ಟಿದ್ದಾರೆ. ಆದರೆ ಕೆಲವೇ ಹೊತ್ತಿನಲ್ಲಿ ಮಂಜುನಾಥ್ ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕರೋನ ಆತಂಕದಲ್ಲಿ ದೂರ ನಿಂತ ಜನ
ಇನ್ನು, ಬಹು ವರ್ಷದಿಂದ ಮಂಜುನಾಥ್ ಈ ಮನೆಗೆ ಬಂದಿರಲಿಲ್ಲ. ಹಾಗಾಗಿ ಸ್ಥಳೀಯರಿಗೆ ಇವರ ಪರಿಚಯ ಇರಲಿಲ್ಲ. ಆಂಬುಲೆನ್ಸ್’ನಲ್ಲಿ ತಂದು ಬಿಟ್ಟು ಹೋಗಿದ್ದು, ತೀವ್ರ ಬಳಲಿದಂತೆ ಕಾಣುತ್ತಿದ್ದರಿಂದ ಸ್ಥಳೀಯರಲ್ಲಿ ಕರೋನ ಆತಂಕ ಹುಟ್ಟಿದೆ. ಆದರೆ ಮಂಜುನಾಥ್ ಅವರಿಗೆ ಜಾಂಡೀಸ್ ಇರುವ ಕುರಿತು ಪೊಲೀಸರಿಗೆ ಶಂಕೆ ಇದೆ.
ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದರು. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422